ADVERTISEMENT

ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವ ಪ್ರಧಾನಿ: ಮಾಜಿ ಶಾಸಕ ಸುನೀಲ ಹೆಗಡೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 12:32 IST
Last Updated 1 ಮೇ 2024, 12:32 IST
ಹಳಿಯಾಳ ತಾಲ್ಲೂಕಿನ ಯಡೋಗಾ ಗ್ರಾಮದಲ್ಲಿ ಬಿಜೆಪಿ ಪರವಾಗಿ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು
ಹಳಿಯಾಳ ತಾಲ್ಲೂಕಿನ ಯಡೋಗಾ ಗ್ರಾಮದಲ್ಲಿ ಬಿಜೆಪಿ ಪರವಾಗಿ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು   

ಹಳಿಯಾಳ: ‘ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾರ್ಥಕ್ಕೆ ಕೆಲಸ ಮಾಡದೇ ಜನರಿಗಾಗಿ, ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಅವರ ಸೇವೆ ಇನ್ನು ದೇಶಕ್ಕೆ ಬೇಕಾಗಿದೆ. ಕೆನರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸೋಣ’ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.

ತಾಲ್ಲೂಕಿನ ಯಡೋಗಾ ಗ್ರಾಮದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮುಖಂಡರಾದ ಮಂಗೇಶ ದೇಶಪಾಂಡೆ ಮಾತನಾಡಿ, ‘ಹಿಂದೆ ಯಾವುದೇ ಅನುದಾನ ಬಂದರೆ ಅದು ಹಂಚಿ ಹೋಗುತ್ತಿತ್ತು. ಆದರೆ ಮೋದಿ ಅವರು ಬಂದ ಮೇಲೆ ಈಗ ಆ ವ್ಯವಸ್ಥೆ ಇಲ್ಲ. ಆನಲೈನ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಸುಮಾರು 370 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ತಲುಪಿಸಿದ್ದಾರೆ’ ಎಂದರು.

ADVERTISEMENT

ಪಕ್ಷದ ಅಧ್ಯಕ್ಷರಾದ ವಿಠ್ಠಲ ಸಿದ್ಧನ್ನವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಗೀನಾ ದೇವರಾಯ, ಪ್ರಮುಖರಾದ ಲಕ್ಷ್ಮಣ ಬಾಮನವಾಡ್ಕರ, ಈಶ್ವರ ಮಿರಾಶಿ, ಡೋಂಗ್ರು ಕೆಸರೇಕರ, ಪಾಂಡು ಪಾಟೀಲ್, ಸಂಜಯ ಹಿರೇಕರ, ಮಾರುತಿ ಪೇಟ್ನೇಕರ, ಪರಶುರಾಮ ಕರಗಸಕರ, ಸಹದೇವ ಮಿರಾಶಿ, ಸ್ಥಳೀಯರು, ಕಾರ್ಯಕರ್ತರು ಇದ್ದರು.

ಹಳಿಯಾಳ ತಾಲ್ಲೂಕಿನ ಯಡೋಗಾ ಗ್ರಾಮದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಮುಖಂಡ ಮಂಗೇಶ ದೇಶಪಾಂಡೆ ಭಾಜಪ ಪರವಾಗಿ ಚುನಾವಣಾ ಪ್ರಚಾರ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.