ADVERTISEMENT

‘ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:18 IST
Last Updated 5 ಜೂನ್ 2019, 15:18 IST

ಶಿರಸಿ: ‘ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ. ಕರ್ತವ್ಯ ಅದು. ಇದನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು’ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಪರಿಸರ ದಿನಾಚರಣೆ ಸಂದರ್ಭದಲ್ಲಿ ಫೇಸ್‌ಬುಕ್ ಗೋಡೆಯ ಮೇಲೆ ಬರೆದು, ವಿಡಿಯೊ ಹಾಕಿರುವ ಅವರು, ‘ಹಿಂದೂಗಳಿಗೆ ಪರಿಸರದ ಜೊತೆಗೆ ಬದುಕುವುದು ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ. ಹಿಂದೂಗಳಿಗೆ ಪರಿಸರ ದಿನಾಚರಣೆ ವಿಷಯವಲ್ಲ. ಪರಿಸರ ರಕ್ಷಣೆ ಬದುಕಲ್ಲಿ ನಡೆಸಿಕೊಂಡು ಬಂದಿರುವುದು. ಬದುಕಿನ ಹಾದಿಯಿದು. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾದಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT