ADVERTISEMENT

ಅಪಾಯದಲ್ಲಿದ್ದ ಕಾಡುಪಾಪದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 15:46 IST
Last Updated 18 ಫೆಬ್ರುವರಿ 2021, 15:46 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ರಸ್ತೆ ದಾಟುತ್ತಿದ್ದ ಕಾಡುಪಾಪ
ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ರಸ್ತೆ ದಾಟುತ್ತಿದ್ದ ಕಾಡುಪಾಪ   

ಕಾರವಾರ: ಕಾಳಿ ಹುಲಿ ಸಂರಕ್ಷಿತ ವಲಯದ (ಕೆ.ಟಿ.ಆರ್) ರಾಜ್ಯ ಹೆದ್ದಾರಿಯಲ್ಲಿದ್ದ ‘ಕಾಡುಪಾಪ’ವನ್ನು, ಸಾರ್ವಜನಿಕರು ರಕ್ಷಿಸಿದ್ದಾರೆ.

ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ಕಾಡುಪಾಪವು ನಿಧಾನವಾಗಿ ತೆವಳುತ್ತ ರಸ್ತೆ ದಾಟಲು ಪ್ರಯತ್ನಿಸುತ್ತಿತ್ತು. ಗಾಯಗೊಂಡಿದ್ದ ಅದು, ವಾಹನಗಳ ಕೆಳಗೆ ಸಿಲುಕುವ ಅಪಾಯದಲ್ಲಿತ್ತು.

ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಮಾಜಾಳಿಯ ಕೃಷಿಕ ರಮೇಶ ಕದಮ್, ಕೈಗಾ ಅಣುವಿದ್ಯುತ್ ಕೇಂದ್ರದ ಸಿಬ್ಬಂದಿ ಪರೇಶ ನಾಯ್ಕ ಹಾಗೂ ಅಶೋಕ ಭಜಂತ್ರಿ ಅದನ್ನು ಗಮನಿಸಿದರು. ಬಳಿಕ ಕಾಡುಪಾಪವನ್ನು ಜತನದಿಂದ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದರು. ಕುಂಬಾರವಾಡದ ಅರಣ್ಯ ಇಲಾಖೆ ಕಚೇರಿಯಲ್ಲಿ ಅದನ್ನು ಉಪಚರಿಸಿ ಮರಳಿ ಕಾಡಿಗೆ ಬಿಡಲಾಯಿತು.

ADVERTISEMENT

ಅತ್ಯಂತ ಸೂಕ್ಷಜೀವಿಯಾದ ಕಾಡುಪಾಪವನ್ನು ಸರಿಯಾದ ಸಮಯದಲ್ಲಿ ರಕ್ಷಿಸಿದ್ದನ್ನು ಕುಂಬಾರವಾಡ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡ್ಕರ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.