ADVERTISEMENT

ಭಟ್ಕಳ | ರೈಲು ನಿಲ್ದಾಣದ ನೀರಿನ ಪಂಪ್‌ ಕಳವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:59 IST
Last Updated 22 ಜೂನ್ 2024, 13:59 IST
   

ಭಟ್ಕಳ: ಮುರ್ಡೇಶ್ವರ ರೈಲು ನಿಲ್ದಾಣದಲ್ಲಿಯ ನೀರಿನ ಪಂಪ್ ಕಳುವಾಗಿದೆ ಎಂದು ಕೊಂಕಣ ರೈಲ್ವೆಯ ಸೆಕ್ಷನ್ ಎಂಜಿನಿಯರ್ ಜಾನ್ ಡೇನಿಯಲ್ ಶುಕ್ರವಾರ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮುರ್ಡೇಶ್ವರ ರೈಲು ನಿಲ್ದಾಣದ ಜಾಗದಲ್ಲಿ ತೆರೆದ ಬಾವಿಯೊಂದಿದ್ದು ಅದಕ್ಕೆ 2024ರ ಮಾರ್ಚ್‌ ತಿಂಗಳಲ್ಲಿ 5 ಎಚ್.ಪಿ. ಸಾಮರ್ಥ್ಯದ ಕಿರ್ಲೋಸ್ಕರ್ ಕಂಪನಿಯ ವಿದ್ಯುತ್ ಸಬ್ ಮರ್ಸಿಬಲ್ ಪಂಪ್ ಅಳವಡಿಸಲಾಗಿತ್ತು. ಜೂನ್‌ 20ರಂದು ಪಂಪ್‌ನಿಂದ ನೀರು ಬಿಡಲು ತೆರಳಿದಾಗ ಪಂಪ್ ಕಳವಾಗಿರುವುದು ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT