ADVERTISEMENT

ಉತ್ತಮ ಮನಸ್ಸಿಲ್ಲದಿದ್ದರೆ ಯೋಗ್ಯ ವ್ಯಕ್ತಿ ಆಗಲಾರ: ರಾಘವೇಶ್ವರ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:17 IST
Last Updated 14 ಮೇ 2025, 14:17 IST
ಭಟ್ಕಳದ ಮಣ್ಕುಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿದರು
ಭಟ್ಕಳದ ಮಣ್ಕುಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿದರು   

ಭಟ್ಕಳ: ‘ಎಷ್ಟೇ ಹಣ, ಐಶ್ವರ್ಯ, ಅಂತಸ್ತು ಇದ್ದರೂ, ಉತ್ತಮ ಮನಸ್ಸು, ಭಾವುಕತೆ ಇರದಿದ್ದರೆ ಯೋಗ್ಯ ವ್ಯಕ್ತಿ ಆಗಲಾರ. ಉತ್ತಮ ಮನಸ್ಸು, ಭಾವ ಹೊಂದಿದರೆ ದೇವರನ್ನೂ ಒಲಿಸಿಕೊಳ್ಳಬಹುದು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಮಣ್ಕುಳಿಯ ನಿವೃತ್ತ ಶಿಕ್ಷಕ ಗಜಾನನ ಯಾಜಿ ಅವರ ಮನೆಯಲ್ಲಿ ಈಚೆಗೆ ನಡೆದ ಪಾದಪೂಜೆ ಮತ್ತು ಭಿಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

‘ಉತ್ತಮ ಮನಸ್ಸು ಹಾಗೂ ಭಾವನೆಯಿಂದ ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾವುಕತೆ ಇಲ್ಲದೆ ಜೀವನ ಪೂರ್ಣವಾಗದು. ಭಾವುಕತೆಯೇ ಜ್ಞಾನದ ಕಡೆಗೆ ಕೊಂಡೊಯ್ಯುತ್ತದೆ. ಭಾವನೆಯೇ ಬದುಕಿನ ಸಾರ ಮತ್ತು ತಿರುಳಾಗಿದೆ’ ಎಂದರು.

ADVERTISEMENT

ಶ್ರೀರಾಮ ಪೂಜೆ ನೆರವೇರಿತು. ಕಿತ್ರೆ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಗೀತಾ ಯಾಜಿ, ಮೋಹನ ಹೆಗಡೆ, ನಾರಾಯಣ ಹೆಬ್ಬಾರ, ಶಿವಾನಂದ ಹೆಬ್ಬಾರ, ಮಂಜುನಾಥ ಹೆಬ್ಬಾರ, ಗಣೇಶ ಹೆಬ್ಬಾರ, ಶಂಭು ಹೆಗಡೆ, ಗಣಪತಿ ಶಿರೂರು, ಎಂ.ವಿ. ಭಟ್ಟ, ಪರಮೇಶ್ವರ ಭಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.