ADVERTISEMENT

ಯಲ್ಲಾಪುರ: ಮನೆಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:53 IST
Last Updated 13 ಜೂನ್ 2019, 19:53 IST
ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಮನ ಎಯೊಂದರಲ್ಲಿ ತುಂಬಿದ ನೀರನ್ನು ಹೊರ ಚೆಲ್ಲುತ್ತಿರುವುದು.
ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಮನ ಎಯೊಂದರಲ್ಲಿ ತುಂಬಿದ ನೀರನ್ನು ಹೊರ ಚೆಲ್ಲುತ್ತಿರುವುದು.   

ಯಲ್ಲಾಪುರ:ಬಿಸಿಲಿಗೆಕಂಗೆಟ್ಟಿದ್ದ ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಮಳೆ ಆರಂಭಗೊಂಡಿದೆ. ಬುಧವಾರ ಬೆಳಿಗ್ಗೆ ಜೋರಾಗಿ, ಸಂಜೆಯ ವೇಳೆ ಭಾರಿ ಮಳೆಯಾಯಿತು.

ಪಟ್ಟಣದ ಕಾಳಮ್ಮನಗರದ ಮುಖ್ಯ ರಸ್ತೆಯಪಕ್ಕದಲ್ಲಿರುವನರಸಿಂಹ ಮೂರ್ತಿ ಎಂಬುವವರ ಮನೆಯ ಒಳಗೆ ಚರಂಡಿ ನೀರು ನುಗ್ಗಿದೆ. ಮನೆಯಜಗುಲಿಯಲ್ಲಿದ್ದ ಕೆಲವು ವಸ್ತುಗಳುತೋಯ್ದಿವೆ.ಮನೆಯೊಳಗೆ ತುಂಬಿದ ನೀರನ್ನು ಹೊರ ಹಾಕಲು ಮನೆ ಮಂದಿ ಹರಸಾಹಸ ಪಡಬೇಕಾಯಿತು.

ಮಳೆ ನೀರು ಗಟಾರಗಳಲ್ಲಿ ತುಂಬಿ ಹರಿಯುತ್ತಿವೆ.ಪಟ್ಟಣ ಪಂಚಾಯ್ತಿಯು ಗಟಾರಗಳನ್ನು ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು ರಸ್ತೆಯ ಮೇಲೆ, ಮನೆಗಳ ಕಾಂಪೌಂಡ್‌ಗಳಒಳಗೆ ನುಗ್ಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಲ್ಲೂಕಿನ ಕೆಲವೆಡೆರಭಸದ ಗಾಳಿಗೆಮರಗಳುಬಿದ್ದುವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.