ADVERTISEMENT

ರಾಮನವಮಿ: ತೊಟ್ಟಿಲು ಪೂಜೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:03 IST
Last Updated 13 ಏಪ್ರಿಲ್ 2019, 14:03 IST
ಶ್ರೀರಾಮ ನವಮಿಯ ಅಂಗವಾಗಿ ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ರಾಮಸೀತಾ ದೇವಸ್ಥಾನದಲ್ಲಿ ‘ತೊಟ್ಟಿಲು ಪೂಜೆ’ ನೆರವೇರಿಸಲಾಯಿತು
ಶ್ರೀರಾಮ ನವಮಿಯ ಅಂಗವಾಗಿ ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ರಾಮಸೀತಾ ದೇವಸ್ಥಾನದಲ್ಲಿ ‘ತೊಟ್ಟಿಲು ಪೂಜೆ’ ನೆರವೇರಿಸಲಾಯಿತು   

ಕಾರವಾರ:ಜಿಲ್ಲೆಯ ವಿವಿಧೆಡೆಶನಿವಾರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಮಮಂದಿರ, ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಹಲವು ಸಂಘ ಸಂಸ್ಥೆಗಳಿಂದಪಾನಕ, ಕೋಸಂಬರಿ ವಿತರಿಸಲಾಯಿತು.

ಚಿತ್ತಾಕುಲಾ ಗ್ರಾಮದ ಸೋನಾರವಾಡದ ರಾಮಸೀತಾ ದೇವಸ್ಥಾನದಲ್ಲಿ ಮಧ್ಯಾಹ್ನ 12ಕ್ಕೆ ‘ತೊಟ್ಟಿಲು ಪೂಜೆ’ ಸಲ್ಲಿಸಲಾಯಿತು. ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಮಹಿಳೆಯರು ಸಾಂಪ್ರದಾಯಿಕ ಶೈಲಿಯಲ್ಲಿ ರಾಮನ ವಿಗ್ರಹವನ್ನು ತೂಗಿ ಜೋಗುಳ ಹಾಡಿದರು. ದೇವಸ್ಥಾನದಲ್ಲಿ ರಾಮನಾಮ ಜಪ, ಪಂಚಾಮೃತ ಅಭಿಷೇಕ, ಹೂವಿನ ಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT