
ಪ್ರಜಾವಾಣಿ ವಾರ್ತೆವರ್ಗಾವಣೆ
ಕಾರವಾರ: ಮುಂಡಗೋಡ ಉಪನೋಂದಣಾಧಿಕಾರಿ ದೀಪಾ ಕರಮಡಿ ಅವರನ್ನು ಹಳಿಯಾಳ ಉಪನೋಂದಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ವರ್ಗಾಯಿಸಿ ಜಿಲ್ಲಾ ನೋಂದಣಾಧಿಕಾರಿ ಫಣೀಂದ್ರ ಆದೇಶಿಸಿದ್ದಾರೆ.
ಹಳಿಯಾಳ ಕಚೇರಿಯಲ್ಲಿ ಎಫ್‌ಡಿಎ ಆಗಿದ್ದ ದೀಪಾ ಅವರನ್ನು ಪ್ರಭಾರ ಉಪನೋಂದಣಾಧಿಕಾರಿಯಾಗಿ ನಿಯೋಜನೆ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಯುಟ್ಯೂಬರ್ ಖ್ವಾಜಾ ಬಂದೇನವಾಜ್‌ಗೆ ಸುಳ್ಳು ದಾಖಲೆ ಪಡೆದು ವಿವಾಹ ನೋಂದಣಿ ಮಾಡಿಕೊಡಲಾಗಿದೆ ಎಂಬ ಆರೋಪ ಅವರ ಮೇಲಿತ್ತು. ಈಚೆಗಷ್ಟೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದರು.
ಯಲ್ಲಾಪುರ ಉಪನೋಂದಣಾಧಿಕಾರಿ ಕಲಾವತಿ ಬೂರಗಾವಿ ಅವರಿಗೆ ಮುಂಡಗೋಡ ಉಪನೋಂದಣಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.