ಕುಮಟಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಸೋಮವಾರ ಒಂದು ಅಡಿ ಉದ್ದದ ಕಬ್ಬಿಣದ ಚಾಕು ನುಂಗಿದ್ದ ನಾಗರಹಾವನ್ನು ಉರಗ ರಕ್ಷಕ ಪವನ್ ನಾಯ್ಕ ಮತ್ತು ಪಶುವೈದ್ಯ ಆಸ್ಪತ್ರೆ ಸಹಾಯಕ ಅದ್ವೈತ ಭಟ್ಟ ರಕ್ಷಿಸಿದ್ದಾರೆ.
ಗೋವಿಂದ ನಾಯ್ಕ ಅವರ ಮನೆಯೊಳಗೆ ಬಂದ ನಾಗರ ಹಾವು, ಅಲ್ಲಿಯೇ ಇದ್ದ ಚಾಕು ನುಂಗಿತು. ವಿಷಯ ತಿಳಿದ ಕೂಡಲೇ ಮನೆಗೆ ಬಂದ ಉರಗ ರಕ್ಷಕ ಪವನ್ ನಾಯ್ಕ್ ಅವರು ಹಾವನ್ನು ಅದ್ವೈತ ಭಟ್ಟ ಅವರ ಮನೆಗೆ ಒಯ್ದರು. ಅಲ್ಲಿ ಅರ್ಧ ಗಂಟೆ ಅವಧಿಯಲ್ಲಿ ಚಾಕು ಹೊರತೆಗೆದರು.
‘ಚಾಕುವಿನಿಂದ ಮಾಂಸ ಕತ್ತರಿಸಿ, ತೊಳೆಯದೇ ಇಡಲಾಗಿತ್ತು. ಅದಕ್ಕೆ ಅಂಟಿದ್ದ ಮಾಂಸದ ವಾಸನೆಯಿಂದ, ಅದನ್ನು ಆಹಾರವೆಂದು ಭಾವಿಸಿ ಹಾವು ನುಂಗಿರಬಹುದು. ಹಾವಿಗೆ ಗಾಯ ಆಗಿರಲಿಲ್ಲ. ನಂತರ ಕಾಡಿನಲ್ಲಿ ಬಿಡಲಾಯಿತು’ ಎಂದು ಪವನ್ ನಾಯ್ಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.