
ಗೋಕರ್ಣ: ‘ಸಂಘ ಅನೇಕ ಟೀಕೆಗಳನ್ನು ಅನುಭವಿಸಿದೆ. ಅಪಹಾಸ್ಯಕ್ಕೆ ಗುರಿಯಾಗಿದೆ. ಸಂಘರ್ಷ ಎದುರಿಸಿದೆ. ಇದ್ಯಾವುದಕ್ಕೂ ಜಗ್ಗದೇ ಎಲ್ಲವನ್ನೂ ದಾಟಿಕೊಂಡು ಬಂದಿದೆ. ಇಂದು 100 ವರ್ಷದ ಸಂಭ್ರಮದಲ್ಲಿದೆ’ ಎಂದು ಆರ್.ಎಸ್.ಎಸ್. ಪ್ರಮುಖ ಶಂಕರಾನಂದ ನುಡಿದರು.
ಗೋಕರ್ಣ ಆರ್.ಎಸ್.ಎಸ್ ಶಾಖೆ ಭಾನುವಾರ ಆಯೋಜಿಸಿದ್ದ ಪಥಸಂಚಲನದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
‘ಶಕ್ತಿ ಬಂದಾಗ ಸಂಸ್ಕಾರವಿಲ್ಲದಿದ್ದರೆ ಅದು ಅಹಂಕಾರವಾಗತ್ತೆ. ಆದರೆ ಸಂಘ ಮತ್ತು ಅಹಂಕಾರ ತದ್ವಿರುದ್ಧ ಶಬ್ದ. ಸಂಘಕ್ಕೆ ಶಕ್ತಿ ಬಂದಿದೆ. ಎಲ್ಲಿಯೂ ಅಹಂಕಾರ ತೋರಿಸಿಲ್ಲ. ಲಕ್ಷಾಂತರ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದೆ’ ಎಂದರು.
ಮಾದನಗೇರಿಯ ಗುರುಸ್ವಾಮಿ ರಮೇಶ ಈರಯ್ಯ ನಾಯ್ಕ ಮಾತನಾಡಿ, ‘ಸಂಘದ ಶಕ್ತಿ ಹೆಮ್ಮರವಾಗಿ ಬೆಳೆಯಲಿ. ಪ್ರತಿಯೊಂದು ಮನೆಯಲ್ಲಿಯೂ ದೇಶಭಕ್ತರು ಹುಟ್ಟಲಿ’ ಎಂದು ಹಾರೈಸಿದರು. ಸಂಘವಾಲಕ ಗೋವಿಂದ ಕೆಸನಮನೆ ಇದ್ದರು. ತಾಲ್ಲೂಕು ಕಾರ್ಯವಾಹ ಗಣಪತಿ ಅಡಿ ಸ್ವಾಗತಿಸಿದರು.
ಪಥ ಸಂಚಲನ ಸಾಗುವ ದಾರಿಯುದ್ದಕ್ಕೂ ತಳಿರು ತೋರಣಗಳಿಂದ, ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಯ ಮುಂದೆ ರಂಗೋಲಿ ಬಿಡಿಸಿ, ಗಣವೇಷಧಾರಿಗಳಿಗೆ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.