ADVERTISEMENT

ಮಾರಿಕಾಂಬಾ ಕಾಲೇಜು: ಶೇ 92 ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 13:43 IST
Last Updated 14 ಜುಲೈ 2020, 13:43 IST
ಸಂದೀಪ ಮರಾಠೆ (ಹುಲೇಕಲ್‌ ಕಾಲೇಜು)
ಸಂದೀಪ ಮರಾಠೆ (ಹುಲೇಕಲ್‌ ಕಾಲೇಜು)   

ಶಿರಸಿ: ಇಲ್ಲಿನ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ 92ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 713 ವಿದ್ಯಾರ್ಥಿಗಳಲ್ಲಿ 653 ಜನರು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ 144 ವಿದ್ಯಾರ್ಥಿಗಳಲ್ಲಿ 121 ಜನ ಉತ್ತೀರ್ಣರಾಗಿದ್ದಾರೆ. ಶ್ರೀಧರ ಹೊನ್ನಪ್ಪ ನಾಯ್ಕ (ಶೇ 93.8) ಪ್ರಥಮ, ಶ್ವೇತಾ ಗೋಪಾಲ ದೇವಾಡಗ (ಶೇ 92.16) ದ್ವಿತೀಯ, ಅಣ್ಣಪ್ಪ ಡಿ (ಶೇ 91.5) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 340 ವಿದ್ಯಾರ್ಥಿಗಳಲ್ಲಿ 329 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನೇಹಾ ಸಂಜಯ ನಾಯಕ (ಶೇ 97.8) ಪ್ರಥಮ, ಮಹಿಮಾ ಜಯದೇವ ಹೆಗಡೆ (ಶೇ 97.33) ದ್ವಿತೀಯ, ಅನುಷಾ ಅಶೋಕ ಹೆಗಡೆ (ಶೇ 95) ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಒಟ್ಟು 229 ವಿದ್ಯಾರ್ಥಿಗಳಲ್ಲಿ 203 ಜನರು ಉತ್ತೀರ್ಣರಾಗಿದ್ದಾರೆ. ನಾಗರಾಜ ಸುಣಗಾರ (ಶೇ 95.8) ಪ್ರಥಮ, ಅಪರ್ಣಾ ಹೆಗಡೆ (ಶೇ 95.5) ದ್ವಿತೀಯ, ಶ್ರೀಷ ಹೆಗಡೆ (ಶೇ 95.33) ತೃತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ಯಡಳ್ಳಿ ಕಾಲೇಜಿನ ಫಲಿತಾಂಶ ಶೇ 90

ಶಿರಸಿ: ತಾಲ್ಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನ ಫಲಿತಾಂಶ ಶೇ 90.30ರಷ್ಟಾಗಿದೆ. ವಾಣಿಜ್ಯ ವಿಭಾಗದಲ್ಲಿ ಕಾವ್ಯಾ ಮೋಹನ ಹೆಗಡೆ (ಶೇ 97.17) ಪ್ರಥಮ, ಸಿಂಧು ದಿವಾಕರ ಮಡಿವಾಳ ಮತ್ತು ರಕ್ಷಿತಾ ರಾಜಾರಾಮ ಹೆಗಡೆ (ಶೇ 94.83) ದ್ವಿತೀಯ, ಅಖಿಲಾ ಕೃಷ್ಣಮೂರ್ತಿ ಹೆಗಡೆ (ಶೇ 93), ಕಲಾ ವಿಭಾಗದಲ್ಲಿ ರಾಜೇಶ್ವರಿ ಕೇಶವ ಶೇಟ್ (ಶೇ 85.7) ಪ್ರಥಮ, ಸುಧಾ ಮಹಾಬಲೇಶ್ವರ ಗೌಡ (ಶೇ 76) ದ್ವಿತೀಯ, ಶ್ರೀಶಾ ಗಣಪತಿ ಭಟ್ಟ (ಶೇ 74.17) ತೃತೀಯ ಸ್ಥಾನ ಪಡೆದಿದ್ದಾರೆ. 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

80 ವಿದ್ಯಾರ್ಥಿಗಳು ಉತ್ತೀರ್ಣ

ತಾಲ್ಲೂಕಿನ ಹುಲೇಕಲ್ ಶ್ರೀದೇವಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಹಾಜರಾಗಿದ್ದ 85 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 13 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 15 ದ್ವಿತೀಯ ಶ್ರೇಣಿ ಹಾಗೂ ಆರು ಜನ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಸಂದೀಪ ಸುಧೀರ ಮರಾಠೆ (ಶೇ 95.67) ಪ್ರಥಮ, ಸುಷ್ಮಾ ಸುರೇಶ ಭಟ್ಟ (ಶೇ 91.83) ದ್ವಿತೀಯ, ಚಂದ್ರಶೇಖರ ಗಣಪತಿ ಮರಾಠಿ (ಶೇ 90.33) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನೋಯಲ್ ಫರ್ನಾಂಡೀಸ್ (ಶೇ 95.17) ಪ್ರಥಮ, ಕಲಾವತಿ ಕೇಶವ ಮರಾಠಿ (ಶೇ 94.6) ದ್ವಿತೀಯ, ಗಣೇಶ ರಾಮ ಗೌಡ (ಶೇ 93) ತೃತೀಯ ಸ್ಥಾನ ಪಡೆದಿದ್ದಾರೆ.
ಸ್ನೇಹಾ ಪ್ರಭಾಕರ ಭಟ್ಟ ಕನ್ನಡಕ್ಕೆ 100 ಅಂಕ, ಮಂಗಳಾ ವಿಶ್ವೇಶ್ವರ ಹೆಗಡೆ ರಾಜ್ಯಶಾಸ್ತ್ರಕ್ಕೆ 100 ಅಂಕ, ಸಾಗರ ಅರುಣ ಶೇಟ್ ವ್ಯವಹಾರ ಅಧ್ಯಯನಕ್ಕೆ 100ಕ್ಕೆ 100 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.