ADVERTISEMENT

ಕಾರವಾರ | ಏಳು ಮಂದಿಗೆ ಕೋವಿಡ್, ಎಂಟು ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 3:13 IST
Last Updated 6 ಜೂನ್ 2020, 3:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ ಏಳು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರಾಗಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ಮಂದಿ ಗುಣಮುಖರಾಗಿದ್ದು, ಶುಕ್ರವಾರ ಬಿಡುಗಡೆಯಾಗಿದ್ದಾರೆ.

ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳಲ್ಲಿ ಎಂಟು ವರ್ಷದ ಬಾಲಕ, 10 ವರ್ಷದ ಬಾಲಕಿ, 62 ಮತ್ತು 49 ವರ್ಷದ ಇಬ್ಬರು ಪುರುಷರು, 22 ವರ್ಷದ ಯುವಕ, 29 ಮತ್ತು 25 ವರ್ಷದ ಯುವತಿಯರಿದ್ದಾರೆ. ಇವರ ಪೈಕಿ 29 ವರ್ಷದ ಯುವತಿಯು ಆಂಧ್ರಪ್ರದೇಶದಿಂದ ವಾಪಸಾಗಿದ್ದರು. ಉಳಿದ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಈ ಪೈಕಿ ಯಲ್ಲಾಪುರದ ಆರು ಮಂದಿ ಮತ್ತುಭಟ್ಕಳದ ಒಬ್ಬರಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ಸೋಂಕು ಲಕ್ಷಣ ರಹಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಬಾಲಕ ಗುಣಮುಖ:ಕೋವಿಡ್‌ ದೃಢಪಟ್ಟಿದ್ದ ಮುಂಡಗೋಡದ ಎಂಟು ವರ್ಷದ ಬಾಲಕ ಸೋಂಕುಮುಕ್ತನಾಗಿದ್ದಾನೆ. ಅದೇ ರೀತಿ, ಮೇ 19 ಮತ್ತು 20ರಂದು ಕೋವಿಡ್ ವಾರ್ಡ್‌ಗೆ ದಾಖಲಾಗಿದ್ದಏಳುಮಂದಿ ಗುಣಮುಖರಾಗಿದ್ದು,ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾದೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪೀಡಿತರಲ್ಲಿ ಬಹುಪಾಲು ಬೇರೆ ರಾಜ್ಯಗಳಿಂದ ಬಂದವರೇ ಆಗಿದ್ದಾರೆ.ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ನಿಂದ ಮರಳಿದವರಾಗಿದ್ದಾರೆ. ಅದೇ ರೀತಿ ದುಬೈನಿಂದ ಬಂದವರಲ್ಲೂ ಸೋಂಕು ಕಾಣಿಸಿಕೊಂಡಿದೆ. ನಾವು ಸುರಕ್ಷಿತವಾಗಿಯೇ ಇದ್ದೆವು. ಆದರೆ,ನಮ್ಮ ರಾಜ್ಯದ ಜನರನ್ನು ಪುನಃ ಬರಬೇಡಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸಿ ಕರೆದುಕೊಂಡು ಬರಲಾಗುತ್ತಿದೆ. ಅವರನ್ನು ಯಾವ ಕಾರಣಕ್ಕೂ ದೂರುವ ಮತ್ತು ದೂರ ಮಾಡುವ ಪ್ರಶ್ನೆಯೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.