
ಸಿದ್ದಾಪುರ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿದು ಮನೆಯ ಬಳಿ ದಾಸ್ತಾನು ಇಟ್ಟಿದ್ದ ಮರದ ತುಂಡುಗಳು ಮತ್ತು ಸಾಗಾಟ ಮಾಡಲು ಬಳಸಿದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಕ್ಯಾದಗಿ ವಲಯದ ಹಸ್ವಿಗುಳಿಯಲ್ಲಿ ಸೋಮವಾರ ನಡೆದಿದೆ.
ಕ್ಯಾದಗಿ ವಲಯದ ಅ.ಸ.ನಂ.40ರಲ್ಲಿ ಭರಣಿಗೆ ಜಾತಿಯ ಮರಗಳನ್ನು ಕೊರೆದು ವಿವಿಧ ಅಳತೆಯಲ್ಲಿ ಪರಿವರ್ತಿಸಿದ ಕಿರಣ ರಾಮಾ ನಾಯ್ಕ ತಮ್ಮ ಮನೆಯ ಬಳಿ ದಾಸ್ತಾನು ಇರಿಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 3.820 ಕ್ಯೂ.ಮೀ ಭರಣಿ ಜಾತಿಗೆ ಸೇರಿದ ಮರದ ತುಂಡುಗಳು ಮತ್ತು ಸಾಗಾಟ ಮಾಡಲು ಬಳಸಿದ ವಾಹನವನ್ನು ಜಪ್ತಿಪಡಿಸಿಕೊಂಡಿದ್ದು, ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮೊದಲ ಆರೋಪಿ ಕಿರಣ ರಾಮಾ ನಾಯ್ಕ ತಪ್ಪಿಸಿಕೊಂಡಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ ಎಚ್.ನಾಯ್ಕ, ಮಹಮ್ಮದ್ ಅಶ್ವಾಕ್, ಮತ್ತು ಗಸ್ತು ಅರಣ್ಯ ಪಾಲಕರಾದ ಮಹಮ್ಮದ್ ಇಸ್ಮಾಯಿಲ್, ವೆಂಕಟೇಶ ಪೂಜಾರಿ, ಲೋಕೇಶ್ವರ ಎಂ. ಗೌಡ ಹಾಗೂ ವಾಹನ ಚಾಲಕ ಅಶೋಕ ನಾಯ್ಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.