ADVERTISEMENT

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಕಂದಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 14:32 IST
Last Updated 9 ಸೆಪ್ಟೆಂಬರ್ 2022, 14:32 IST
ಅಂಕೋಲಾ ತಾಲ್ಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ 63ರ ಕಂಚಿನ ಬಾಗಿಲು ಕಿರು ಸೇತುವೆ ಬಳಿ ಶುಕ್ರವಾರ ಆಕಸ್ಮಿಕವಾಗಿ ರಸ್ತೆ ಕುಸಿದಿದೆ
ಅಂಕೋಲಾ ತಾಲ್ಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ 63ರ ಕಂಚಿನ ಬಾಗಿಲು ಕಿರು ಸೇತುವೆ ಬಳಿ ಶುಕ್ರವಾರ ಆಕಸ್ಮಿಕವಾಗಿ ರಸ್ತೆ ಕುಸಿದಿದೆ   

ಅಂಕೋಲಾ: ತಾಲ್ಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ 63ರ ಕಂಚಿನ ಬಾಗಿಲು ಕಿರು ಸೇತುವೆ ಬಳಿ ಶುಕ್ರವಾರ ಆಕಸ್ಮಿಕವಾಗಿ ರಸ್ತೆ ಕುಸಿದಿದೆ. ಇದರಿಂದ ಉಂಟಾದ ಭಾರಿ ಕಂದಕದಿಂದ ವಾಹನಗಳ ಸಂಚಾರಕ್ಕೆ ತಡೆಯಾಗುವ ಆತಂಕ ಎದುರಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.

ಹುಬ್ಬಳ್ಳಿಯನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಹೆದ್ದಾರಿ ಕುಸಿದಾಗ ಯಾವುದೇ ವಾಹನ ಕಂದಕದಲ್ಲಿ ಸಿಲುಕಿಕೊಂಡಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ತಕ್ಷಣ ಧಾವಿಸಿದ ‘112’ ವಾಹನ ಸಿಬ್ಬಂದಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಾಹನಗಳ ಸಂಚಾರಕ್ಕೆ ಅನುವು ಮಾಡಿದರು.

ತಹಶೀಲ್ದಾರ್ ಉದಯ ಕುಂಬಾರ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ರವಾನಿಸಿ, ಸಂಚಾರಕ್ಕೆ ತೊಡಕಾಗದಂತೆ ಕಾರ್ಯನಿರ್ವಸಲು ಸೂಚಿಸಿದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಎಂಜಿನಿಯರ್ ಪ್ರಶಾಂತ ಕೆ. ನಾಯ್ಕ ಭೇಟಿ ನೀಡಿದರು. ಸಿ.ಪಿ.ಐ ಸಂತೋಷ ಶೆಟ್ಟಿ, ಪಿ.ಎಸೈ ಪ್ರವೀಣ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದಾರಿ ಕುಸಿದ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಂದಕದ ಸಮೀಪದಲ್ಲಿ ವಾಹನಗಳು ಚಲಿಸದಂತೆ ನಿರ್ಬಂಧಿಸಿದರು. ಸ್ಥಳದಲ್ಲಿ ಎಚ್ಚರಿಕೆ ಪಟ್ಟಿ ಹಾಗೂ ಸೂಚನಾ ಫಲಕ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.