ADVERTISEMENT

ಬಿ.ಎಚ್.ಶ್ರೀಧರ ಕೃತಿ ಲೋಕಾರ್ಪಣೆ 24ಕ್ಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:56 IST
Last Updated 16 ಏಪ್ರಿಲ್ 2025, 12:56 IST

ಪ್ರಜಾವಾಣಿ ವಾರ್ತೆ

ಶಿರಸಿ: ದಿಲ್ಲಿ ಸಾಹಿತ್ಯ ಅಕಾಡೆಮಿ ಪ್ರಕಟಿತ ಹಿರಿಯ ಸಾಹಿತಿ ಬಿ.ಎಚ್.ಶ್ರೀಧರ ಅವರ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ  ಏ.24ರ ಸಂಜೆ 5ಕ್ಕೆ ನಗರದ ಆರಾಧನಾ ಸಭಾಂಗಣದಲ್ಲಿ ನಡೆಯಲಿದೆ.

ಬಿ.ಎಚ್.ಶ್ರೀಧರ ಕೃತಿಯನ್ನು ಹಿರಿಯ ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಅವರು ಶ್ರೀಧರ ಸಮಗ್ರ ಸಾಹಿತ್ಯ ಅವಲೋಕಿಸಿ ಬರೆದ ವಿಶಿಷ್ಟ ಕೃತಿ ಇದಾಗಿದೆ. ಹಿರಿಯ ಸಾಹಿತಿ ಶಾ.ಮಂ.ಕೃಷ್ಣರಾಯ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಮರ್ಷಕ ಎಂ.ಜಿ.ಹೆಗಡೆ ಕೃತಿ ಕುರಿತು ಮಾತನಾಡುವರು. ಲೇಖಕ ಎಲ್.ಎಸ್.ಶಾಸ್ತ್ರಿ ಭಾಗವಹಿಸುವರು ಎಂದು ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.