ADVERTISEMENT

ಶಿರಸಿ: ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ವಿಧಾನ ಸಭಾಧ್ಯಕ್ಷರ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 6:28 IST
Last Updated 21 ಸೆಪ್ಟೆಂಬರ್ 2020, 6:28 IST
ಪ್ರತಿಭಟನಾಕಾರರು
ಪ್ರತಿಭಟನಾಕಾರರು   

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಹಾಗೂ ಬನವಾಸಿ ಹೊಸ ತಾಲ್ಲೂಕು ರಚನೆಗೆ ಆಗ್ರಹಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯವರು ಸೋಮವಾರ ನಗರದಲ್ಲಿರುವ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆಲದಿನಗಳ ಹಿಂದೆ ಪತ್ರ ಚಳುವಳಿ ಆರಂಭಿಸಿದ್ದ ಸಮಿತಿ ಈಗ ವಿಧಾನ ಸಭಾಧ್ಯಕ್ಷರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲೆ ರಚನೆಗೆ ಒತ್ತಾಯಿಸಿ ಘೋಷಣೆ ಕೂಗಲಾಯಿತು.

ಬನವಾಸಿ ತಾಲ್ಲೂಕಾಗಲು ಅರ್ಹತೆ ಹೊಂದಿದ್ದು, ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ಹಾಗೂ ಬನವಾಸಿ ಹೊಸ ತಾಲ್ಲೂಕು ರಚನೆಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು. ಕಾಗೇರಿ ಅವರ ನಾಯಕತ್ವದಲ್ಲೇ ಈ ಕೆಲಸವಾಗಲಿ ಎಂದು ಒತ್ತಾಯಿಸಿದರು.

ADVERTISEMENT

ಸಮಿತಿಯ ಉಪೇಂದ್ರ ಪೈ, ಮಂಜು ಮೊಗೇರ, ಎಮ್.ಎಮ್.ಭಟ್ಟ, ಪವಿತ್ರಾ ಹೊಸೂರು, ಪರಮಾನಂದ ಹೆಗಡೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.