ಶಿರಸಿ: ಇಲ್ಲಿನ ಪ್ರಶಾಂತಿ ಫೌಂಡೇಶನ್ ಹಾಗೂ ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಸುಧಾರಿಸಲು ಪೌಷ್ಟಿಕ ಆಹಾರದ ಕಿಟ್ ಅನ್ನು ಗುರುವಾರ ವಿತರಿಸಲಾಯಿತು.
ನಗರದ ಕೈಗಾರಿಕಾ ವಸಾಹತುವಿನಲ್ಲಿರುವ ಚೇತನಾ ಸಂಸ್ಥೆಯ ಕಾರ್ಯಾಲಯದಲ್ಲಿ 60 ಫಲಾನುಭವಿ ಮಕ್ಕಳ ಪಾಲಕರಿಗೆ ಕಿಟ್ ಹಸ್ತಾಂತರಿಸಲಾಯಿತು. ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ. ಪೌಷ್ಟಿಕ ಆಹಾರದ ಕಿಟ್‌ನ್ನು ಸಾಂಕೇತಿಕವಾಗಿ ವಿತರಿಸಿದರು. ಇದೇ ವೇಳೆ ಪೌಷ್ಟಿಕ ಆಹಾರ ಮಾಡುವ ವಿಧಾನ ಹಾಗೂ ನೀಡುವ ಪ್ರಮಾಣದ ಬಗ್ಗೆ ವಿವರಿಸಲಾಯಿತು.
ಮನೋವೈದ್ಯೆ ಡಾ.ಮಧುಮಿತಾ ಅವರು, ಶಾರೀರಿಕ ಹಾಗೂ ಮಾನಸಿಕ ಅಂಗವಿಲಕತೆಯನ್ನು ಗುರುತಿಸುವುದು ಮತ್ತು ಅವರೊಂದಿಗೆ ಹೇಗೆ ಸಂಯಮದಿಂದ ವರ್ತಿಸಬೇಕು ಎಂಬುದನ್ನು ಪಾಲಕರಿಗೆ ಹೇಳಿದರು.
ಈ ಸಂದರ್ಭದಲ್ಲಿ ಪ್ರಶಾಂತಿ ಫೌಂಡೇಶನ್‌ನ ಅಧ್ಯಕ್ಷ ಡಾ.ಗಿರಿಧರ್, ಟ್ರಸ್ಟಿಗಳಾದ ಡಾ.ಮಲಾ ಗಿರಿಧರ, ಅನಿಲ್ ಬಳ್ಳಾರಿ, ಮನೋವೈದ್ಯ ಡಾ. ಆಯೇಷ್ ತೇಲಂಗಾ, ಸಂಸ್ಥೆಯ ಸಿಬ್ಬಂದಿ, ಫಲಾನುಭವಿಗಳು, ಪಾಲಕರು, ಸ್ವಯಂ ಸೇವಕರು ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.