ADVERTISEMENT

ಶಿರಸಿ | ಐವನ್ ಡಿಸೋಜಾ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 12:52 IST
Last Updated 20 ಆಗಸ್ಟ್ 2024, 12:52 IST
ಶಿರಸಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳು ಐವನ್ ಡಿಸೋಜಾ ವಿರುದ್ಧ ಸಿಪಿಐ ಶಶಿಕಾಂತ ವರ್ಮಾ ಅವರಲ್ಲಿ ದೂರು ನೀಡಿದರು. 
ಶಿರಸಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳು ಐವನ್ ಡಿಸೋಜಾ ವಿರುದ್ಧ ಸಿಪಿಐ ಶಶಿಕಾಂತ ವರ್ಮಾ ಅವರಲ್ಲಿ ದೂರು ನೀಡಿದರು.    

ಶಿರಸಿ: ದೇಶದ ಸಮಗ್ರತೆಗೆ ಧಕ್ಕೆಯಾಗುವ ಹೇಳಿಕೆ ನೀಡಿದ್ದಲ್ಲದೇ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರ ಬಗ್ಗೆ ಸಂವಿಧಾನ ಬಾಹಿರ ಹಾಗೂ ಉದ್ರೇಕಕಾರಿ ಭಾಷಣ ಮಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರುದ್ಧ ಮಂಗಳವಾರ ಇಲ್ಲಿಯ ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕವು ಸ್ವಯಂ ಪ್ರೇರಿತ ದೂರು ನೀಡಿದೆ. 

ಐವನ್ ಡಿಸೋಜಾ ಅವರು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದು, ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಅಭದ್ರತೆ ಕಾಡುವಂತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಪಿಐ ಶಶಿಕಾಂತ ವರ್ಮಾ ದೂರು ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ, ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ನಗರ ಯುವ ಮೋರ್ಚಾ ಅಧ್ಯಕ್ಷ ವಿಜಯ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸುದರ್ಶನ ವೈದ್ಯ, ಸಾಮಾಜಿಕ ಜಾಲತಾಣದ ಸಂಚಾಲಕ ರವಿ ಶೆಟ್ಟಿ, ಎಸ್.ಟಿ. ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಭೂಷಣ ಅನ್ವೇಕರ್, ಸಂಜಯ್ ಸಜ್ಜನ್, ನಿತಿನ್ ರಾಯ್ಕರ್, ರಾಜಾನಂದ ದೇಶಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT