ADVERTISEMENT

ಶಿರಸಿ | ಮಹಿಳಾ ಉತ್ಸವ: 200ಕ್ಕೂ ಅಧಿಕ ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:39 IST
Last Updated 10 ಫೆಬ್ರುವರಿ 2025, 13:39 IST
ಶಿರಸಿ ತಾಲ್ಲೂಕಿನ ಕಾನಗೋಡ‌ನ ಶ್ರೀಸಿದ್ದಿ‌ ಮಹಿಳಾ‌ ಮಂಡಳಿ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ ಜರುಗಿತು
ಶಿರಸಿ ತಾಲ್ಲೂಕಿನ ಕಾನಗೋಡ‌ನ ಶ್ರೀಸಿದ್ದಿ‌ ಮಹಿಳಾ‌ ಮಂಡಳಿ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ ಜರುಗಿತು   

ಶಿರಸಿ: ತಾಲ್ಲೂಕಿನ ಕಾನಗೋಡ‌ನ ಶ್ರೀಸಿದ್ದಿ‌ ಮಹಿಳಾ‌ ಮಂಡಳಿಯ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ, ಪಂಚಾಯಿತಿ ವ್ಯಾಪ್ತಿಯ ಮಾಹಿತಿ ಕೈಪಿಡಿ ಬಿಡುಗಡೆ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮಹಿಳೆಯರು, ಹೆಣ್ಣು ಮಕ್ಕಳಿಗಾಗಿ ಹಗ್ಗ ಜಗ್ಗಾಟ, ತಲೆ ಮೇಲೆ‌ ಪುಸ್ತಕ ಇಟ್ಟು ಓಟ, ಸಂಗೀತ‌ ಖುರ್ಚಿ, ಏಕ್‌ಮಿನಿಟ್, ಕಸೂತಿ ಸ್ಪರ್ಧೆ, ಸಿಹಿ ತಿಂಡಿ‌ ಸ್ಪರ್ಧೆ, ಭಾರತೀಯ ಸೊಗಡಿನ ಫ್ಯಾಷನ್‌ ಶೋಗಳು ಗಮನ ಸೆಳೆದವು. 200ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.

ಸಮಾರೋಪದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇಳೆ ಸಾಹಿತಿ ಸತೀಶ ಹೆಗಡೆ, ಮುಖ್ಯಮಂತ್ರಿ ಪದಕ‌ ಪಡೆದ ಅರಣ್ಯ ಇಲಾಖೆ ನೌಕರ ವಿ.ಟಿ.ನಾಯ್ಕ, ಯಕ್ಷಗಾನದ ಯುವ ಪ್ರತಿಭೆ ತುಳಸಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಮನುವಿಕಾಸದ ಗಣಪತಿ ಭಟ್, ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ‌ ಮುಳಖಂಡ, ಪತ್ರಕರ್ತೆ ಶೈಲಜಾ ಗೋರ್ನಮನೆ, ಪಂಚಾಯಿತಿ ಅಧ್ಯಕ್ಷ ಪ್ರಕಾಶ ನಾಯ್ಕ, ಪ್ರಮುಖರಾದ ಜಿ.ವಿ.ಕಾನಗೋಡ, ರಾಜಾರಾಮ ಭಟ್, ಡಿ.ವಿ.ಹೆಗಡೆ,  ಗೀತಾ ಪೂಜಾರಿ, ಸಂಘದ ಕಾರ್ಯದರ್ಶಿ ವಿಮಲಾ ಹೆಗಡೆ ಇದ್ದರು. 

ಮಂಡಳಿ ಅಧ್ಯಕ್ಷೆ ಜಲಜಾಕ್ಷಿ ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಗೀತಾ ಪೂಜಾರಿ, ಸುವರ್ಣಾ ಕಾನಗೋಡ, ವಿಮಲಾ ಹೆಗಡೆ, ಶೋಭಾ‌ ಮಶೀಗದ್ದೆ, ಪ್ರತಿಮಾ ಹೆಗಡೆ, ಶೋಭಾ ಹೆಗಡೆ, ರವೀಂದ್ರ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.