ADVERTISEMENT

ಶಿರಸಿ: ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ

ಮಾರಿಕಾಂಬಾ ಯುವಕ ಮಂಡಳಿ ಗಣೇಶೋತ್ಸವಕ್ಕೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:24 IST
Last Updated 4 ಸೆಪ್ಟೆಂಬರ್ 2024, 13:24 IST
ಶಿರಸಿ ನಗರದ ಮಾರಿಕಾಂಬಾ ಯುವಕ ಮಂಡಳಿಯ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಿದ್ಧತೆ ನಡೆದಿರುವುದು
ಶಿರಸಿ ನಗರದ ಮಾರಿಕಾಂಬಾ ಯುವಕ ಮಂಡಳಿಯ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಿದ್ಧತೆ ನಡೆದಿರುವುದು   

ಶಿರಸಿ: ನಗರದ ಮಾರಿಕಾಂಬಾ ಯುವಕ ಮಂಡಳಿಯ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಭ್ರಮದಲ್ಲಿದ್ದು, ಪ್ರಸಕ್ತ ವರ್ಷ ಅದ್ದೂರಿ ಉತ್ಸವಾಚರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ನಾಗೇಶ ದೇವಳಿ ಹೇಳಿದರು. 

ನಗರದಲ್ಲಿ ಬುಧವಾರ ಗಣೇಶೋತ್ಸವ ಸಿದ್ಧತೆ ತೋರಿಸಿ ನಂತರ ಮಾತನಾಡಿದ ಅವರು, ‘ಮಂಡಳಿಯು 1974ರಿಂದ ಪ್ರತಿ ವರ್ಷ ಉತ್ಸವದ ವೇಳೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಇವುಗಳ ನಡುವೆ ಪ್ರಸಕ್ತ ವರ್ಷ ಸುವರ್ಣೋತ್ಸವ ಆಚರಿಸಲು ನಿರ್ಧರಿಸಿದ್ದು, ಸೆ.7ರಿಂದ ಸೆ.17ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಮಾರಿಕಾಂಬಾ ಕಲ್ಯಾಣ ಮಂಟಪದ ಹಿಂಬದಿಯ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದರು.

ಸೆ.7ರಂದು ಮೂರ್ತಿ ಪ್ರತಿಷ್ಠಾಪನೆ, ಸೆ.8ಕ್ಕೆ ಮಾರಿಗುಡಿ ಮಹಾರಾಜ ವೇದಿಕೆ ಉದ್ಘಾಟನೆ, ಸೆ.9ಕ್ಕೆ ಸಭಾ ಕಾರ್ಯಕ್ರಮ ಹಾಗೂ ಗೌರವಾರ್ಪಣೆ, ಸೆ.10ಕ್ಕೆ ಸಹಸ್ರ ಮೋದಕ ಹವನ, 11 ಹಾಗೂ 12ಕ್ಕೆ ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, 13ಕ್ಕೆ ಲಕ್ಷ್ಮೀನಾರಾಯಣ ಯಾಗ, ಅನ್ನ ಸಂತರ್ಪಣೆ ಹಾಗೂ ಅರಿಶಿಣ ಕುಂಕುಮ ಕಾರ್ಯಕ್ರಮ, ಸೆ.14 ರಸಮಂಜರಿ, ಸೆ.15 ಹಾಗೂ 16ಕ್ಕೆ ನೃತ್ಯ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. 

ADVERTISEMENT

ಮಂಡಳಿಯ ಕೆ.ಪಿ.ತುಮಕೂರು, ಜಗದೀಶ ಗೌಡ, ಗಣಪತಿ ನಾಯ್ಕ, ರಾಜೇಶ ಶೆಟ್ಟಿ, ಯೋಗೇಂದ್ರ ಬಿಳ್ಗಿಕರ್, ಅನಂತ ಶೆಟ್ಟಿ, ರಾಧಾಕೃಷ್ಣ ನಾಯಕ, ಚಂದ್ರು ಉಡುಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.