ADVERTISEMENT

ಶಿರಸಿ: ಆಂಬುಲೆನ್ಸ್‌ನಲ್ಲಿ ಹೆರಿಗೆ‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 13:37 IST
Last Updated 12 ಜನವರಿ 2022, 13:37 IST
ಆರೋಗ್ಯ ಕವಚ ಆಂಬುಲೆನ್ಸ್ ನಲ್ಲಿ ಸಂತೊಳ್ಳಿ ಗ್ರಾಮದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು.
ಆರೋಗ್ಯ ಕವಚ ಆಂಬುಲೆನ್ಸ್ ನಲ್ಲಿ ಸಂತೊಳ್ಳಿ ಗ್ರಾಮದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು.   

ಶಿರಸಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಸಂತೊಳ್ಳಿ ಗ್ರಾಮದ ಚೈತ್ರಾ ಕಾಶಂಬಿ ಅವರನ್ನು ಬುಧವಾರ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯದಲ್ಲಿಯೇ ಅವರು ಆರೋಗ್ಯ ಕವಚ ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.

ಸಂತೊಳ್ಳಿಯಿಂದ ಗರ್ಭಿಣಿಯನ್ನು ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಬುಗಡಿಕೊಪ್ಪ ಕ್ರಾಸ್ ಬಳಿ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ಯೋಗೇಶ ಕರಿಯಣ್ಣನವರ ಮಹಿಳೆಗೆ ವೈದ್ಯಕೀಯ ಉಪಚಾರ ನೀಡಿ ಸುರಕ್ಷಿತ ಹೆರಿಗೆ ಮಾಡಿಸಿದರು. ಬಳಿಕ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು.

‘ಆಸ್ಪತ್ರೆಗೆ ಕರೆತರುವವರೆಗೆ ಮಹಿಳೆ ನೋವು ನಿಯಂತ್ರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಹೀಗಾಗಿ ಮಾರ್ಗಮಧ್ಯೆಯೇ ಹೆರಿಗೆ ಮಾಡಿಸಲಾಯಿತು. ತಾಯಿ, ಮಗು ಸುರಕ್ಷಿತವಾಗಿದ್ದಾರೆ’ ಎಂದು ಯೋಗೇಶ ಹೇಳಿದರು. ಆಂಬುಲೆನ್ಸ್‌ ಚಾಲಕ ನಾಗರಾಜ, ಸಂತೊಳ್ಳಿ ಭಾಗದ ಆಶಾ ಕಾರ್ಯಕರ್ತೆ ಸಹಕರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.