ADVERTISEMENT

ಕತ್ತಲು ಹರಿಯುವ ಮುನ್ನ ಶಿರಸಿ ಪೇಟೆ ಸ್ತಬ್ಧ

ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ವರ್ತಕರ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:19 IST
Last Updated 9 ಜುಲೈ 2020, 14:19 IST
ಸ್ವಯಂಪ್ರೇರಿತ ಲಾಕ್‌ಡೌನ್ ಕಾರಣಕ್ಕೆ ಗುರುವಾರ ಸಂಜೆ 5.15ರ ವೇಳೆಗೆ ಶಿರಸಿಯ ಚನ್ನಪಟ್ಟಣ ಬಜಾರದಲ್ಲಿ ಕಂಡುಬಂದ ದೃಶ್ಯ
ಸ್ವಯಂಪ್ರೇರಿತ ಲಾಕ್‌ಡೌನ್ ಕಾರಣಕ್ಕೆ ಗುರುವಾರ ಸಂಜೆ 5.15ರ ವೇಳೆಗೆ ಶಿರಸಿಯ ಚನ್ನಪಟ್ಟಣ ಬಜಾರದಲ್ಲಿ ಕಂಡುಬಂದ ದೃಶ್ಯ   

ಶಿರಸಿ: ನಗರದಲ್ಲಿ ವಾರದ ಈಚೆಗೆ ಕೆಲ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಪ್ರಕರಣ ಪತ್ತೆಯಾಗಿರುವುದರಿಂದ, ಸೋಂಕು ಪ್ರಸರಣ ನಿಯಂತ್ರಣಕ್ಕೆ ವರ್ತಕರು ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಮುಂದಾಗಿದ್ದಾರೆ. ಗುರುವಾರದಿಂದ ಹೊಸ ವ್ಯವಸ್ಥೆ ಜಾರಿಗೊಂಡಿದೆ.

ಪ್ರತಿದಿನ ಸಂಜೆ 5 ಗಂಟೆಯಿಂದ ಮರುದಿನ ಬೆಳಗಿನವರೆಗೆ ತರಕಾರಿ, ಕಿರಾಣಿ ಸೇರಿದಂತೆ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿರುತ್ತವೆ. ಹಾಲು, ಔಷಧ, ಆಸ್ಪತ್ರೆ ಹೊರತುಪಡಿಸಿ, ಎಲ್ಲ ವರ್ತಕರು ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದ್ದರು. ಮೊದಲ ದಿನವೇ ಸರಿಯಾದ ಸಮಯಕ್ಕೆ ಅಂಗಡಿಗಳು ಬಾಗಿಲು ಹಾಕಿದ್ದರಿಂದ, 5.15ರ ವೇಳೆಗೆ ಎಲ್ಲ ಪ್ರಮುಖ ಬೀದಿಗಳು ಸ್ತಬ್ಧವಾಗಿದ್ದವು. ಜನಸಂಚಾರವೂ ವಿರಳವಾಗಿತ್ತು. ಜುಲೈ 31ರವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT