ADVERTISEMENT

ಶಿರಸಿ | 'ತೆರೆದಮನೆಯ ಮೂಲಕ ಪೊಲೀಸ್ ವ್ಯವಸ್ಥೆ ಅರಿವು'

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 12:54 IST
Last Updated 20 ಆಗಸ್ಟ್ 2024, 12:54 IST
ಶಿರಸಿಯ ಸೇಂಟ್ ಅಂಥೋನಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ನಗರ ಠಾಣೆಗೆ ಬರ ಮಾಡಿಕೊಂಡ ಪೊಲೀಸರು ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು
ಶಿರಸಿಯ ಸೇಂಟ್ ಅಂಥೋನಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ನಗರ ಠಾಣೆಗೆ ಬರ ಮಾಡಿಕೊಂಡ ಪೊಲೀಸರು ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು    

ಶಿರಸಿ: ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಪೊಲೀಸ್ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಲಾಯಿತು.

ನಗರದ ಸೇಂಟ್ ಅಂಥೋನಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ನಗರ ಠಾಣೆಗೆ ಬರ ಮಾಡಿಕೊಂಡು ಅವರಿಗೆ ಪೊಲೀಸ್ ಇಲಾಖೆಯ ಸಂಘಟನೆ, ದರ್ಜೆ, ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಜತೆ ವೈರ್‌ಲೆಸ್, ಆಯುಧಗಳ ಬಳಕೆ, ಬಂದಿಖಾನೆಗಳ ಮಾಹಿತಿ ಸೇರಿದಂತೆ ಠಾಣೆಯ ಕಾರ್ಯ ವೈಖರಿ, ಮಕ್ಕಳ ಸಂರಕ್ಷಣಾ ಕಾಯ್ದೆ, ಕಾನೂನು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಯಿತು. 

ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಬಿ. ಮಾತನಾಡಿ, ‘ಮಕ್ಕಳಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಇರುವ ಭಯವನ್ನು ಹೊಗಲಾಡಿಸಿ ಭರವಸೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.  ಡಿಎಸ್‌ಪಿ ಗಣೇಶ ಕೆ.ಎಲ್., ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಎಎಸ್ಐ ಹೊನ್ನಪ್ಪ ಅಗೇರ, ಸಿಬ್ಬಂದಿ ಮಂಗಳಮೂರ್ತಿ, ಅರುಣ ಲಮಾಣಿ, ಪ್ರವೀಣ್, ದೀಪಾ ಹರಿಜನ, ಮಂಜುನಾಥ ಕಾಶಿಕೊವಿ ಕಾರ್ಯ ನಿರ್ವಹಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.