ಶಿರಸಿ: ಇಲ್ಲಿನ ವೈದ್ಯ ದಂಪತಿಯ ಅವಳಿ ಮಕ್ಕಳು ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ 99ರಷ್ಟು ಸಮಾನ ಫಲಿತಾಂಶ ಪಡೆದಿದ್ದಾರೆ.
ಮಕ್ಕಳ ತಜ್ಞ ಡಾ. ದಿನೇಶ ಹೆಗಡೆ ಹಾಗೂ ರೋಗಶಾಸ್ತ್ರ ಸಲಹೆಗಾರ್ತಿ ಡಾ. ಸುಮನ್ ಹೆಗಡೆ ಅವರ ಮಕ್ಕಳಾದ ದಕ್ಷ ಹೆಗಡೆ ನಾಲ್ಕು ವಿಷಯಗಳಲ್ಲಿ 100ರಷ್ಟು ಅಂಕ ಪಡೆದರೆ, ರಕ್ಷಾ ಹೆಗಡೆ ಎರಡು ವಿಷಯಗಳಲ್ಲಿ 100 ಅಂಕ ಪಡೆದಿದ್ದಾರೆ. 600ಕ್ಕೆ 594 ಅಂಕ ಪಡೆದಿರುವ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
‘590ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆ ಮಕ್ಕಳಿಗಿತ್ತು. ಇಬ್ಬರಿಗೂ ಸಮಾನವಾಗಿ ಅಂಕ ಬಂದಿರುವುದು ವಿಶೇಷ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ಇಬ್ಬರ ನಡುವೆ ಎರಡು ಅಂಕಗಳ ವ್ಯತ್ಯಾಸವಿತ್ತು. ಈಗ ಅದು ಸರಿಯಾದಂತಾಗಿದೆ’ ಎಂದು ಡಾ.ಸುಮನ್ ಹೆಗಡೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.