ಶಿರಸಿ ತಾಲ್ಲೂಕಿನ ಸುಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧೆಯೊಬ್ಬರಿಗೆ ವಯಸ್ಕ ಬಿಸಿಜಿ ಚುಚ್ಚುಮದ್ದು ನೀಡಲಾಯಿತು
ಶಿರಸಿ: ‘ಹಿರಿಯರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಅವರ ಸೇವೆ ಮಾಡುವುದು ಸುಯೋಗವೆಂದು ಭಾವಿಸಬೇಕು’ ಎಂದು ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ ಹೇಳಿದರು.
ತಾಲ್ಲೂಕಿನ ಸುಯೋಗ ಫೌಂಡೇಷನ್‌ನ ಸುಯೋಗಾಶ್ರಮದಲ್ಲಿ ಬುಧವಾರ ನಡೆದ ವಯಸ್ಕ ಬಿಸಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಯೋಗ ಆಶ್ರಮದ ಮುಖ್ಯಸ್ಥೆ ಲತಿಕಾ ಭಟ್ ಮಾತನಾಡಿ, ‘ಕ್ಷಯ ರೋಗ ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ಅತ್ಯಂತ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆಯುವಲ್ಲಿ ಯಾವುದೇ ಹಿಂಜರಿಕೆ ಬೇಡ’ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ನಾಯ್ಕ ಮಾತನಾಡಿ, ‘ಕ್ಷಯ ಮಕ್ತ ಭಾರತ ಮಾಡುವಲ್ಲಿ ಬಿಸಿಜಿ ಚುಚ್ಚುಮದ್ದು ಅತಿ ಅವಶ್ಯಕವಾಗಿದೆ. ಇದನ್ನು ಎಲ್ಲರೂ ಪಡೆಯಬೇಕು’ ಎಂದು ಹೇಳಿದರು.
ದತ್ತಾತ್ರೇಯ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಮೇಲ್ವಿಚಾರಕಿ ರೂಪಾ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಸಿ. ಹಿರೇಮಠ್, ಆರೋಗ್ಯ ನಿರೀಕ್ಷಕ ಸಾಜನ ಕಾಟೇನಳ್ಳಿ, ಗೀತಾ ನಾಯ್ಕ, ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಜ್ಯೋತಿ ನಾಯ್ಕ, ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾಶ್ರೀ ಇದ್ದರು.
ಕಾರ್ಯಕ್ರಮದಲ್ಲಿ 35ಕ್ಕೂ ಅಧಿಕ ಮಂದಿ ವಯಸ್ಕ ಬಿಸಿಜಿ ಚುಚ್ಚುಮದ್ದು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.