ADVERTISEMENT

ಶಿರಸಿ | ‘ಕವಿತೆ ವಾಚನ’ ಸ್ಪರ್ಧೆ ನಾಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:09 IST
Last Updated 15 ಜುಲೈ 2025, 6:09 IST
   

ಶಿರಸಿ: ಇಲ್ಲಿನ ‘ಅನೇಕ’ ಟ್ರಸ್ಟ್  ವತಿಯಿಂದ ವೆಂಕಟರಾವ್ ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಕಾರದಲ್ಲಿ ವಿದ್ಯಾರ್ಥಿಗಳಲ್ಲಿ ಕಾವ್ಯದ ಅಭಿರುಚಿ ಬೆಳೆಸುವ ದೃಷ್ಟಿಯಿಂದ ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಪಿಯುಸಿ ವಿದ್ಯಾರ್ಥಿಗಳಿಗೆ  ‘ಕವಿತೆಯೊಡನೆ ನಾವು’ ಕಾರ್ಯಕ್ರಮವನ್ನು ಆ.16ರಂದು ಕಾಲೇಜಿನ ಸಂಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿದೆ.

ಈ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಕವಿತೆ ವಾಚಿಸಿದ ತಲಾ ಐದು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ₹500 ನಗದು ಹಾಗೂ ₹500 ಮೊತ್ತದ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸುವುದಾಗಿ ಟ್ರಸ್ಟ್ ಸಂಚಾಲಕ ಉಮೇಶ ನಾಯ್ಕ ತಿಳಿಸಿದ್ದಾರೆ.

ಪ್ರತಿ ಕಾಲೇಜಿನಿಂದ ಎರಡು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ನಂತರದಲ್ಲಿ ಅದೇ ವೇದಿಕೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಪಿಯುಸಿ ಕಾಲೇಜುಗಳ ಪ್ರಾಚಾರ್ಯರು ಆ.10ರೊಳಗೆ ತಮ್ಮ ಕಾಲೇಜಿನ ಎರಡು ವಿದ್ಯಾರ್ಥಿಗಳ ಹೆಸರನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ 9448906589 ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.