
ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶಿರಸಿ ನಗರ ಭಾಗ ಪರಿಷತ್, ಶಿರಸಿ ನಗರ ಮಾತೃ ಮಂಡಳದ ಸಹಯೋಗದಡಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಇಲ್ಲಿನ ಯೋಗ ಮಂದಿರದ 29ನೇ ವಾರ್ಷಿಕೋತ್ಸವ ಜ.31ರಂದು ನೆರವೇರಲಿದೆ.
ಅಂದು ಬೆಳಿಗ್ಗೆ 8.30ರಿಂದ ರುದ್ರಹವನ, ಶತರುದ್ರ, ಸಾಮೂಹಿಕ ಗಣಹವನ, ಮಾತೆಯರಿಂದ ಕುಂಕುಮಾರ್ಚನೆ, ಶ್ರೀಗಳ ಪಾದಪೂಜೆ, ಬಿಕ್ಷ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 3.30 ಗಂಟೆಯಿಂದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೀರ್ತನೆಗಾರ ನಾರಾಯಣದಾಸ ಹೀಪನಳ್ಳಿ ಹಾಗೂ ನೇತ್ರತಜ್ಞ ಡಾ.ಶಿವರಾಮ.ಕೆ.ವಿ ಅವರನ್ನು ಸನ್ಮಾನಿಸಲಾಗುವುದು. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ ಬಳ್ಳಿ, ಕೇಂದ್ರ ಮಾತೃಮಂಡಳದ ಅಧ್ಯಕ್ಷೆ ಗೀತಾ ಹೆಗಡೆ ಶೀಗೇಮನೆ ಉಪಸ್ಥಿತರಿರುವರು. ಮಾತೆಯರಿಂದ ಭಗವದ್ಗೀತೆ ಪಠಣ, ಸಾಧಕರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಶ್ರೀಗಳ ಆಶೀರ್ವಚನ, ಮಂತ್ರಾಕ್ಷತೆಯೊಂದಿಗೆ ವಾರ್ಷಿಕೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ ಉಪಾಧ್ಯ, ಕಾರ್ಯದರ್ಶಿ ಸಿ.ಎಸ್.ಹೆಗಡೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.