ADVERTISEMENT

ಉತ್ತರ ಕನ್ನಡ: ಆರು ಮಂದಿ ಗುಣಮುಖ, ಇಬ್ಬರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 15:47 IST
Last Updated 27 ಜೂನ್ 2020, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ:ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾದರು.

ಅವರಲ್ಲಿ ಕಾರವಾರದ 64 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ, ಜೊಯಿಡಾದ 19 ವರ್ಷದ ಯುವತಿ, ಯಲ್ಲಾಪುರದ 13 ವರ್ಷದ ಬಾಲಕ, ಸಿದ್ದಾಪುರದ 50 ವರ್ಷದ ಪುರುಷ ಮತ್ತು ಭಟ್ಕಳದ 18 ವರ್ಷದ ಯುವಕ ಸೇರಿದ್ದಾರೆ.

ಇಬ್ಬರಿಗೆ ದೃಢ:ಈ ನಡುವೆ, ಶನಿವಾರ ಮತ್ತಿಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಆಂಧ್ರಪ್ರದೇಶದಿಂದ ಮರಳಿರುವ ಭಟ್ಕಳದ 38 ವರ್ಷದ ವ್ಯಕ್ತಿ ಹಾಗೂ ಮುಂಬೈನಿಂದ ಹೊನ್ನಾವರಕ್ಕೆ ಬಂದಿರುವ32 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಆ ಮಹಿಳೆಯ ತಂದೆ ಮತ್ತು ಎರಡು ವರ್ಷದ ಮಗುವಿಗೆ ಕೋವಿಡ್ ಕಾಣಿಸಿಕೊಂಡಿತ್ತು.ಜಿಲ್ಲೆಯಲ್ಲಿ ಪ್ರಸ್ತುತ 35 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಐ.ಸಿ.ಯು.ಗೆ ದಾಖಲು:ಕೋವಿಡ್ ದೃಢಪಟ್ಟು ಕಾರವಾರದ ‘ಕ್ರಿಮ್ಸ್‌’ಗೆ ದಾಖಲಾಗಿರುವ ಅಂಕೋಲಾದ 45 ವರ್ಷದ ವ್ಯಕ್ತಿಗೆ (ಯು.ಕೆ. 169) ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಅವರನ್ನು ಸಂಸ್ಥೆಯ ಕೋವಿಡ್ ವಾರ್ಡ್‌ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಉಳಿದಂತೆ, ಇತರ ಎಲ್ಲ ಸೋಂಕಿತರ ಆರೋಗ್ಯವೂ ಸ್ಥಿರವಾಗಿದ್ದು, ರೋಗ ಲಕ್ಷಣ ರಹಿತವಾಗಿದೆ ಎಂದು ಸಂಸ್ಥೆಯ ಆರೋಗ್ಯ ಬುಲೆಟಿನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.