
ಕಾರವಾರ: ಮನೆಯೊಂದರ ಆವರಣದಲ್ಲಿ 6 ಹೆಬ್ಬಾವುಗಳ ಸೆರೆ!
ಕಾರವಾರ: ನಗರದ ಕಠಿಣಕೋಣದ ಮನೆಯೊಂದರ ಆವರಣದಲ್ಲಿ ಭಾನುವಾರ 6 ಹೆಬ್ಬಾವುಗಳು ಕಾಣಿಸಿಕೊಂಡಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ರಚನೆಗೆ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹೆಬ್ಬಾವುಗಳು ಪತ್ತೆಯಾಗಿದ್ದವು. ಆತಂಕಗೊಂಡ ಸ್ಥಳೀಯರು ಉರಗ ರಕ್ಷಣೆ ಮಾಡುವ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಅವರಿಗೆ ಕರೆ ಮಾಡಿದ್ದರು.
ಸೆರೆಯಾದ ಹೆಬ್ಬಾವುಗಳು 8ರಿಂದ 12 ಅಡಿ ಉದ್ದದವರೆಗೆ ಇದ್ದವು. ಅವುಗಳನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯಕ್ಕೆ ಬಿಡಲಾಗಿದೆ ಎಂದು ಗೋಪಾಲ ನಾಯ್ಕ ತಿಳಿಸಿದ್ದಾರೆ.
ಬೇಸಿಗೆಯ ಆರಂಭ ಹಾವುಗಳ ಮಿಲನಕ್ರಿಯೆಯ ಸಮಯವಾಗಿದೆ. ಹೆಣ್ಣು ಹಾವು ಹುಡುಕೊಂಡು ಗಂಡು ಹಾವುಗಳು ಬರುವುದು ಸಹಜ. ಹೀಗಾಗಿ, ಒಂದೇ ಕಡೆ ಇಷ್ಟೊಂದು ಸಂಖ್ಯೆಯಲ್ಲಿ ಹಾವು ಕಾಣಿಸಿಕೊಂಡಿವೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.