ಭಟ್ಕಳ: ತಾಲ್ಲೂಕಿನ ಹಡೀನ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜು ಸತತ 4ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 800 ಮೀ, 1500 ಮೀ, 3000ಮೀ, 4X400 ಮೀ ರೀಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಧನ್ಯ ಡಿ. ಗೊಂಡ 100, 200 ಮೀ ಓಟ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ 4X100 ಮೀ, ರೀಲೆ ಪ್ರಥಮ, ಹಿತಾಶ್ರಿ ಗೊಂಡ 800 ಮೀ ಓಟದಲ್ಲಿ ದ್ವಿತೀಯ, 400 ಮೀ. ಹರ್ಡಲ್ಸ್ ಪ್ರಥಮ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಮೇಘನಾ ಎಂ ನಾಯ್ಕ 3000 ಮೀ. ಓಟದಲ್ಲಿ ದ್ವಿತೀಯ, 1500 ಮೀ. ದ್ವಿತೀಯ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮೋನಿಕಾ ದೇವಾಡಿಗ 400ಮೀ. ಓಟದಲ್ಲಿ ಪ್ರಥಮ 4X400 ಮೀ. ರೀಲೆ ಪ್ರಥಮ, ತನುಜಾ ಜಿ ದೇವಾಡಿಗ 100ಮೀ. ಹರ್ಡಲ್ಸ್ ದ್ವಿತೀಯ, ಎತ್ತರ ಜಿಗಿತ ದ್ವಿತೀಯ. ಬಿಂದುಶ್ರೀ ಕೆ ದೇವಾಡಿಗ 400 ಮೀ. ಓಟದಲ್ಲಿ ತೃತೀಯ, 4X100 ಮೀ ರೀಲೆ ಪ್ರಥಮ, 4X400 ಮೀ ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಚಿತ್ರಾ ಗುಡ್ಡಗಾಡು ಓಟದಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಆಶಿತಾ ದೇವಾಡಿಗ ತ್ರಿವಿಧ ಜಿಗಿತ ದ್ವಿತೀಯ. ದೀಪಶ್ರೀ ನಾಯ್ಕ 4X100 ಮೀ. ರೀಲೆ ಪ್ರಥಮ. 100 ಹರ್ಡಲ್ಸ್‌ನಲ್ಲಿ ತೃತೀಯ. ಗಗನಾ ನಾಯ್ಕ ಗುಂಡು ಎಸೆತ ತೃತೀಯ. ರಕ್ಷಾ ನಾಯ್ಕ ಈಟಿ ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ. ವಿಸ್ಮಿತಾ ನಡಿಗೆಯಲ್ಲಿ ದ್ವಿತೀಯ. ಮೇಘನಾ ದೇವಾಡಿಗ 4X100 ಮೀ ರೀಲೆ ಪ್ರಥಮ. ಸಿಂಧೂ ಅರೇರಾ ಕರಾಟೆ ಪ್ರಥಮ. ಗಾಯತ್ರಿ ಮಂಕಿಕರ ಕರಾಟೆ ಪ್ರಥಮ. ಯಶಸ್ವಿನಿ ಪಿ. ನಾಯ್ಕ ಕರಾಟೆ ಪ್ರಥಮ, ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಸಂಜನಾ ಎನ್ ನಾಯ್ಕ ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ತನುಶ್ರೀ ಮೊಗೇರ ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಕಾವ್ಯ ನಾಯ್ಕ ಚೆಸ್ ಸ್ಪರ್ದೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಕೊಕ್ಕೊ, ತ್ರೋಬಾಲ್, ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಆಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.