ADVERTISEMENT

ಲಘು ವಾಹನಗಳ ಸಂಚಾರ ಆರಂಭ

ಮುಂಡಗೋಡ– ಬಂಕಾಪುರ ರಾಜ್ಯ ಹೆದ್ದಾರಿಯಲ್ಲಿ ಹರಿದಿದ್ದ ಜಲಾಶಯದ ನೀರು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 14:21 IST
Last Updated 29 ಆಗಸ್ಟ್ 2019, 14:21 IST
ಮುಂಡಗೋಡ– ಬಂಕಾಪುರ ರಾಜ್ಯ ಹೆದ್ದಾರಿಯ ದುರಸ್ತಿ ಕಾರ್ಯವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ರವಿಗೌಡ ಪಾಟೀಲ ವೀಕ್ಷಿಸಿದರು
ಮುಂಡಗೋಡ– ಬಂಕಾಪುರ ರಾಜ್ಯ ಹೆದ್ದಾರಿಯ ದುರಸ್ತಿ ಕಾರ್ಯವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ರವಿಗೌಡ ಪಾಟೀಲ ವೀಕ್ಷಿಸಿದರು   

ಮುಂಡಗೋಡ: ಇತ್ತೀಚಿನ ಮಳೆಯಿಂದ ಸಂಪರ್ಕ ಕಡಿತಗೊಂಡಿದ್ದ ಮುಂಡಗೋಡ– ಬಂಕಾಪುರ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಲಘು ವಾಹನಗಳ ಸಂಚಾರ ಆರಂಭವಾಗಿದೆ.

ಭಾರಿ ಮಳೆಯಿಂದಾಗಿ ಸನವಳ್ಳಿ ಜಲಾಶಯ ಕೋಡಿ ಬಿದ್ದಿತ್ತು. ಹಾಗಾಗಿಜಲಾಶಯದ ಸುರಕ್ಷತೆಯಿಂದ ನೀರನ್ನು ಹೊರ ಹಾಕಲು ರಾಜ್ಯ ಹೆದ್ದಾರಿಯನ್ನು ಅಗೆಯಲಾಗಿತ್ತು.ಅದರಲ್ಲಿಹರಿದ ನೀರು ಅರಣ್ಯದ ಮೂಲಕ ಹಳ್ಳಕ್ಕೆ ಸೇರುತ್ತಿತ್ತು. ಇದರಿಂದ ಪಟ್ಟಣದಿಂದ ಬಂಕಾಪುರಕ್ಕೆ ತೆರಳಲು ಬಳಸುವ ದೈನಂದಿನ ಮಾರ್ಗದಲ್ಲಿ 15– 20 ದಿನಗಳಿಂದ ವಾಹನ ಸಂಚಾರವಿರಲಿಲ್ಲ. ತಡಸ್ ಅಥವಾ ಅಂಟಾಳ ಮೂಲಕ ಸುತ್ತಿಬಳಸಿ ಪ್ರಯಾಣಿಕರು ಸಂಚರಿಸುವ ಅನಿವಾರ್ಯತೆ ಇತ್ತು.

ಮಳೆ ನಿಂತಿದ್ದರಿಂದ ಹಾಗೂ ಜಲಾಶಯದಿಂದ ಹೊರ ಹೋಗುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಕೂಡಲೇ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಹೆದ್ದಾರಿಯಲ್ಲಿ ಹಳೆಯ ಪೈಪ್‌ಗಳನ್ನು ಅಳವಡಿಸಿ ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಿದ್ದರು. ಆದರೆ, ಪೈಪ್‌ಗಳ ಬಾಳಿಕೆ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಹಾಗಾಗಿ ಅವುಗಳನ್ನುತೆಗೆದು ಹೊಸ ಪೈಪ್ ಅಳವಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ADVERTISEMENT

‘ಈಗ ಹಾಕಿರುವ ಪೈಪ್‌ಗಳು ಗಟ್ಟಿಯಾಗಿವೆ. ದೊಡ್ಡವಾಹನಗಳುಸಂಚರಿಸಿದನಂತರವಷ್ಟೇ ತಾತ್ಕಾಲಿಕ ರಸ್ತೆಯ ಗುಣಮಟ್ಟದ ಬಗ್ಗೆ ಹೇಳಬಹುದು’ ಎಂದು ಸ್ಥಳೀಯ ನಿವಾಸಿ ಸಂಪತ್ ಹೇಳಿದರು.

‘ಸದ್ಯ ಕಾರು, ಬೈಕ್‌ಗಳು ಸಂಚರಿಸುತ್ತಿವೆ. ಮಳೆ ಎರಡು ದಿನವಾದರೂ ಬಿಡುವು ನೀಡಬೇಕು. ಆಗ ಗೊರಚು ಮಣ್ಣು ಹಾಕಿ ಸಮತಟ್ಟು ಮಾಡಲು ಸಾಧ್ಯವಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಬಿ.ಆರ್.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.