ADVERTISEMENT

‘ಲೇಡೀಸ್ ಬೀಚ್’ನಲ್ಲಿ ಸಿಲುಕಿದ್ದ ಮೀನುಗಾರನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:17 IST
Last Updated 19 ಆಗಸ್ಟ್ 2021, 15:17 IST
ಕಾರವಾರದ ಲೇಡೀಸ್ ಬೀಚ್‌ನಲ್ಲಿ ಸಿಲುಕಿದ್ದ ಮೀನುಗಾರರೊಬ್ಬರನ್ನು (ದೋಣಿಯಲ್ಲಿ ಕೆಳಗೆ ಕುಳಿತವರು) ಕರಾವಳಿ ಕಾವಲು ಪಡೆಯ ಪೊಲೀಸರು ಗುರುವಾರ ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು
ಕಾರವಾರದ ಲೇಡೀಸ್ ಬೀಚ್‌ನಲ್ಲಿ ಸಿಲುಕಿದ್ದ ಮೀನುಗಾರರೊಬ್ಬರನ್ನು (ದೋಣಿಯಲ್ಲಿ ಕೆಳಗೆ ಕುಳಿತವರು) ಕರಾವಳಿ ಕಾವಲು ಪಡೆಯ ಪೊಲೀಸರು ಗುರುವಾರ ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು   

ಕಾರವಾರ: ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿನ ಸಮೀಪದ ‘ಲೇಡೀಸ್ ಬೀಚ್’ನಲ್ಲಿ ಮೂರು ದಿನಗಳಿಂದ ಬಾಕಿಯಾಗಿದ್ದ ಮೀನುಗಾರರೊಬ್ಬರನ್ನು ಕರಾವಳಿ ಕಾವಲು ಪಡೆ ಪೊಲೀಸರು ಗುರುವಾರ ರಕ್ಷಣೆ ಮಾಡಿದ್ದಾರೆ.

ಒಡಿಶಾದ ನಿರ್ಮಲ್ ಕುಸಮ್ (45) ರಕ್ಷಣೆಯಾದವರು. ಮೂರು ದಿನಗಳಿಂದ ಅನ್ನಾಹಾರವಿಲ್ಲದೇ ಅವರು ಕಡಲತೀರದಲ್ಲಿ ಬಾಕಿಯಾಗಿದ್ದರು. ಅವರ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಸಿ.ಪಿ.ಐ ನಿಶ್ಚಲ್ ಕುಮಾರ್ ನೇತೃತ್ವದ ತಂಡದವರು, ದೋಣಿಯಲ್ಲಿ ದಡಕ್ಕೆ ಕರೆದುಕೊಂಡು ಬಂದರು.

ನಿತ್ರಾಣಗೊಂಡಿದ್ದ ಮೀನುಗಾರನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಲ್ಲಿ ಹೇಗೆ ಬಾಕಿಯಾದರು ಎಂಬ ಬಗ್ಗೆ ತಿಳಿದುಬಂದಿಲ್ಲ. ಬೈತಖೋಲ್ ಮೀನುಗಾರಿಕಾ ಬಂದರಿನ ಸಮೀಪದಲ್ಲೇ ಇರುವ ಈ ಕಡಲತೀರದ ಸಮೀಪದಲ್ಲೇ ಕದಂಬ ನೌಕಾನೆಲೆಯ ಆವರಣವಿದೆ. ಹಾಗಾಗಿ ಅಲ್ಲಿಗೆ ಹೋಗಲು ರಸ್ತೆ, ದಾರಿಯಿಲ್ಲ. ಸಮುದ್ರದಲ್ಲಿ ದೋಣಿಯ ಮೂಲಕವೇ ತೆರಳಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.