ADVERTISEMENT

ಬೆಂಗಳೂರು– ಕಾರವಾರ ನಡುವೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 12:47 IST
Last Updated 11 ಅಕ್ಟೋಬರ್ 2019, 12:47 IST
   

ಕಾರವಾರ: ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಸಿಟಿ ಜಂಕ್ಷನ್ (ಮೆಜೆಸ್ಟಿಕ್) – ಕಾರವಾರ–ಯಲಹಂಕ ಜಂಕ್ಷನ್ ನಡುವೆ ‘ಸುವಿಧಾ ಸ್ಪೆಷಲ್’ ರೈಲುಗಳು ಸಂಚರಿಸಲಿವೆ.

ಮೆಜೆಸ್ಟಿಕ್‌ನಿಂದ ಅ.25 ಮತ್ತು 28ರಂದು 11.55ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 3.30ಕ್ಕೆ ಕಾರವಾರಕ್ಕೆ ತಲುಪಲಿವೆ. ಕಾರವಾರದಿಂದ ಅ.26 ಮತ್ತು ಅ.29ರಂದು ಸಂಜೆ 4ಕ್ಕೆ ರೈಲುಗಳು ಸಂಚರಿಸಲಿವೆ.ಅವು ಮರುದಿನ ಬೆಳಿಗ್ಗೆ 8ಕ್ಕೆಯಲಹಂಕ ತಲುಪಲಿವೆ.ಈ ರೈಲಿಗೆ ವಿಶೇಷಪ್ರಯಾಣ ದರ ನಿಗದಿ ಮಾಡಲಾಗಿದೆ. ಇವು ಶ್ರವಣಬೆಳಗೊಳದ ಮೂಲಕ ಸಾಗುತ್ತವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT