ADVERTISEMENT

‘ವರ್ಚುವಲ್ ಲ್ಯಾಬ್’ ಹೊಂದಿದ ಏಕೈಕ ಶಾಲೆ

ಅಂಕೋಲಾ ತಾಲ್ಲೂಕಿನ ಹಿಲ್ಲೂರು ಪ್ರೌಢಶಾಲೆ: ಕಲಿಕೆಗೆ ಆಧುನಿಕ ತಂತ್ರಜ್ಞಾನಗಳ ಬಳಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 12:48 IST
Last Updated 20 ಡಿಸೆಂಬರ್ 2019, 12:48 IST
ಅಂಕೋಲಾ ತಾಲ್ಲೂಕಿನ ಹಿಲ್ಲೂರು ಪ್ರೌಢಶಾಲೆಯ ‘ವರ್ಚುವಲ್ ಲ್ಯಾಬ್‌’ನಲ್ಲಿ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು
ಅಂಕೋಲಾ ತಾಲ್ಲೂಕಿನ ಹಿಲ್ಲೂರು ಪ್ರೌಢಶಾಲೆಯ ‘ವರ್ಚುವಲ್ ಲ್ಯಾಬ್‌’ನಲ್ಲಿ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು   

ಕಾರವಾರ: ತಾಲ್ಲೂಕು ಕೇಂದ್ರದಿಂದ32 ಕಿಲೋಮೀಟರ್ ದೂರದ ಗ್ರಾಮದಲ್ಲಿದ್ದರೂ ಇದುಆಧುನಿಕ ಸೌಲಭ್ಯಗಳುಳ್ಳ ಪ್ರೌಢಶಾಲೆ. ಮಕ್ಕಳಿಗೆ ಹೈಟೆಕ್ ಕಲಿಕೆಯಅನುಭವ ನೀಡುವ ಪಾಠೋಪಕರಣಗಳು. ಗುಣಮಟ್ಟದ ಶಿಕ್ಷಣದಿಂದಸತತವಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳು...

ಈ ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವುದು ಅಂಕೋಲಾ ತಾಲ್ಲೂಕಿನ ಹಿಲ್ಲೂರು ಪ್ರೌಢಶಾಲೆ. ಸಾರ್ವಜನಿಕ ಶಿಕ್ಷಣ ಇಲಾಖೆಯುಎಚ್.ಜಿ.ಗೋವಿಂದೇಗೌಡ ಅವರ ಹೆಸರಿನಲ್ಲಿ ನೀಡುವ ‘ಅತ್ಯುತ್ತಮ ಪ್ರೌಢಶಾಲೆ’ ಪುರಸ್ಕಾರಕ್ಕೆ ಈ ವರ್ಷ ಭಾಜನವಾಗಿದೆ.

‘ಶಾಲೆಗೆ ಹಸಿರಿನಿಂದ ಕೂಡಿದ, ಸುಂದರ ಕ್ರೀಡಾಂಗಣದ ವ್ಯವಸ್ಥೆ ಇದೆ. ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡು ಸಾಲುಮರದ ತಿಮ್ಮಕ್ಕ ಉದ್ಯಾನವಿದೆ. ಅದಕ್ಕೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ. ಅಷ್ಟಭುಜಾಕೃತಿಯ ಧ್ವಜಸ್ತಂಭವಿದೆ.ಶಾಲಾ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯವಿದೆ. ಕೈತೋಟ ಹಾಗೂ ಔಷಧವನವಿದೆ. 30ಕ್ಕೂ ಹೆಚ್ಚು ಜಾತಿಯ ಔಷಧೀಯಸಸ್ಯಗಳಿವೆ’ ಎಂದು ವಿವರಿಸುತ್ತಾರೆ ವಿಜ್ಞಾನ ಶಿಕ್ಷಕ ಸುಧೀರ ನಾಯಕ.

ADVERTISEMENT

‘ಅತ್ಯಾಧುನಿಕ ಸೌಲಭ್ಯವಿರುವ ಡಾ.ಸಿ.ವಿ.ರಾಮನ್ ಇ–ಕಲಿಕಾ ಕೇಂದ್ರ ಎಂಬ ವರ್ಚುವಲ್ ಲ್ಯಾಬ್ ಇದೆ.ಈ ವ್ಯವಸ್ಥೆ ರಾಜ್ಯದ 21 ಶಾಲೆಗಳಲ್ಲಿ ಮಾತ್ರ ಇದ್ದು,ಜಿಲ್ಲೆಯಲ್ಲಿ ಈ ಸೌಲಭ್ಯ ಇರುವ ಏಕೈಕ ಶಾಲೆ ನಮ್ಮದು. 21 ಲ್ಯಾಪ್‌ಟಾಪ್‌ಗಳಿವೆ. ಬ್ಯಾಟರಿ, ಯು.ಪಿ.ಎಸ್, ಎಲ್‌.ಇ.ಡಿ ಸ್ಕ್ರೀನ್, ಹೆಡ್‌ಫೋನ್, ಇಂಟರ್‌ನೆಟ್ ಸೌಲಭ್ಯವಿದೆ. ಇದರಿಂದ ಮಕ್ಕಳು ತಮಗೆ ಬೇಕಾದ ಪಾಠಗಳನ್ನು ವಿಡಿಯೊಮೂಲಕ ನೋಡುತ್ತಾರೆ. ಇತಿಹಾಸದ ಯುದ್ಧದ ದೃಶ್ಯಗಳನ್ನು ವಿಡಿಯೊದಲ್ಲಿ ನೋಡುವ ವ್ಯವಸ್ಥೆ ಇದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ನಾಗರಾಜ ರಾಯ್ಕರ್.

‘ಜಿಲ್ಲೆಯಲ್ಲಿರುವ ಐದು ವಿಜ್ಞಾನ ಕೇಂದ್ರಗಳ ಪೈಕಿ ನಮ್ಮದೂ ಒಂದು. ಸುಸಜ್ಜಿತವಾದ ಪ್ರಯೋಗಾಲಯವಿದೆ. ಮಕ್ಕಳ ಉನ್ನತ ಕಲಿಕೆಗೆ ಇದರಿಂದ ಅನುಕೂಲವಾಗಲಿದೆ. ವಾಚನಾಲಯವಿದೆ. ಒಟ್ಟು 122 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕರೂ ಸೇರಿ ಏಳು ಮಂದಿ ಶಿಕ್ಷಕರಿದ್ದಾರೆ. ವಿಜ್ಞಾನ ಶಿಕ್ಷಕ ಸುಧೀರ್ ನಾಯಕ ಅವರ ಮಾರ್ಗದರ್ಶನದಲ್ಲಿ ಇದುವರೆಗೆ 30ಕ್ಕೂ ಹೆಚ್ಚು ಮಕ್ಕಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. 10ಕ್ಕೂ ಹೆಚ್ಚು ಪ್ರತಿಭೆಗಳು ರಾಷ್ಟ್ರಮಟ್ಟವನ್ನು ತಲುಪಿದ ದಾಖಲೆಯಿದೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಎರೆಗೊಬ್ಬರ ತಯಾರಿ:‘ಪ್ಲಾಸ್ಟಿಕ್ಕುರಿತು ಜಾಗೃತಿಕಾರ್ಯಕ್ರಮಗಳನ್ನು ಹಿಲ್ಲೂರು ಪ್ರೌಢಶಾಲೆ ಮಕ್ಕಳು ಹಮ್ಮಿಕೊಂಡಿದ್ದು, ಶಾಲೆಯಲ್ಲಿ ಎರೆಗೊಬ್ಬರ ತಯಾರಿಕೆ ತೊಟ್ಟಿಯೂ ಇದೆ. ಕೊಳೆಯುವ ಕಸಗಳನ್ನು ವಿಂಗಡಿಸಿ ಇದಕ್ಕೆ ಬಳಸಲಾಗುತ್ತದೆ. ಸಾವಯವ ಗೊಬ್ಬರದ ಮಹತ್ವಮತ್ತು ನಿರ್ವಹಣೆಯನ್ನು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಕಲಿಸಲಾಗುತ್ತಿದೆ.ಜೊತೆಗೆ ಅಡುಗೆಯ ತ್ಯಾಜ್ಯಗಳನ್ನು ಬಳಸಿ ರಸಗೊಬ್ಬರ ತಯಾರಿಸಲುಪೈಪ್ ಕಂಪೋಸ್ಟಿಂಗ್ ವ್ಯವಸ್ಥೆ ಇದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ನಾಗರಾಜ ರಾಯ್ಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.