ADVERTISEMENT

ಶಿರಸಿ: ಪಿಎಫ್ಐ ನಂಟು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 16:14 IST
Last Updated 27 ಸೆಪ್ಟೆಂಬರ್ 2022, 16:14 IST
ಅಬ್ದುಲ್ ರಜಾಕ್
ಅಬ್ದುಲ್ ರಜಾಕ್   

ಶಿರಸಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಟಿಪ್ಪು ನಗರದ ಅಬ್ದುಲ್ ರಜಾಕ್ ಅಬ್ದುಲ್ ಶುಕುರ್ ಹೊನ್ನಾವರ (28) ವರ್ಷ, ಅತಾವುಲ್ಲಾಅಬ್ದುಲ್ ಘನಿ ತಡಸ್ (29), ಕೆರೆಕೊಪ್ಪದ ಇಮಾಮ್ ಅಬ್ದುಲ್ ಸಮ್ಮದ್ ಸಾಬ್ (32) ಬಂಧಿತರು. ಈ ಪೈಕಿ ಬಂಧಿತ ಅಬ್ದುಲ್ ರಜಾಕ್ ಈಚೆಗೆ ತನಿಖಾ ದಳ (ಐ.ಬಿ.) ವಶಕ್ಕೆ ಪಡೆದಿರುವ ಅಬ್ದುಲ್ ಅಜೀಜ್ ಸಹೋದರನಾಗಿದ್ದಾನೆ.

‘ಆರೋಪಿಗಳು ಅಪರಾಧ ಚಟುವಟಿಕೆ ನಡೆಸಲು ಜನರನ್ನು ಸೇರಿಸುವ ಕಾರ್ಯದಲ್ಲಿ ತೊಡಗಿದ್ದರು. ಜನರನ್ನು ಕೆರಳಿಸುವ ಮತ್ತು ಕೋಮು ಸೌಹಾರ್ತೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.