ಕಾರವಾರ: ತಾಲ್ಲೂಕಿನ ಬಾರೆ ಗ್ರಾಮದ ಬಳಿ ಕೈಗಾ ರಸ್ತೆಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಕೈಗಾದ ಉದ್ಯೋಗಿಯೊಬ್ಬರು ತೆರಳುತ್ತಿದ್ದ ಕಾರಿನ ಸಮೀಪದಲ್ಲೇ ಹುಲಿ ಓಡಾಟ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೈಗಾದ ಉದ್ಯೋಗಿ ಚೇತನ್ ಎಂಬುವವರು ಸೆರೆಹಿಡಿದ ದೃಶ್ಯ ಇದಾಗಿದ್ದು, ದೊಡ್ಡ ಗಾತ್ರದ ಹುಲಿ ರಸ್ತೆ ಪಕ್ಕದಿಂದ ಕಾರಿನತ್ತ ಬರುವ ದೃಶ್ಯಗಳಿವೆ.
‘ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಓಡಾಟ ನಡೆಸುವ ಹುಲಿ ವರ್ಷಕ್ಕೆ ಒಂದೆರಡು ಬಾರಿ ಬಾರೆ ಗ್ರಾಮದ ಅರಣ್ಯ ಭಾಗದಲ್ಲಿ ಓಡಾಟ ನಡೆಸುತ್ತದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಾರೆ ಗ್ರಾಮದ ರಸ್ತೆ ಮೂಲಕವೇ ನಿತ್ಯ ಕೈಗಾದ ಅಣು ಸ್ಥಾವರಕ್ಕೆ ತೆರುವ ಉದ್ಯೋಗಿಗಳು, ಕಾರವಾರದಿಂದ ಯಲ್ಲಾಪುರಕ್ಕೆ ಸಂಚರಿಸುವ ಹತ್ತಾರು ವಾಹನಗಳು ಸಂಚರಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.