ADVERTISEMENT

ಯಲ್ಲಾಪುರ | ತಂಬಾಕು ಉತ್ಪನ್ನ ಮಾರಾಟ: ₹ 2800 ದಂಡ

​ಪ್ರಜಾವಾಣಿ ವಾರ್ತೆ
Published 28 ಮೇ 2024, 14:27 IST
Last Updated 28 ಮೇ 2024, 14:27 IST
ಯಲ್ಲಾಪುರ ತಾಲ್ಲೂಕು ತಂಬಾಕು ತನಿಖಾದಳ ಪಟ್ಟಣದ ಅಂಗಡಿಗಳ ಮೇಲೆ ದಾಳಿ ನಡೆಸಿತು. ತನುಜಾ ಸವದತ್ತಿ, ಡಾ. ನರೆಂದ್ರ ಪವಾರ ಭಾಗವಹಿಸಿದ್ದರು
ಯಲ್ಲಾಪುರ ತಾಲ್ಲೂಕು ತಂಬಾಕು ತನಿಖಾದಳ ಪಟ್ಟಣದ ಅಂಗಡಿಗಳ ಮೇಲೆ ದಾಳಿ ನಡೆಸಿತು. ತನುಜಾ ಸವದತ್ತಿ, ಡಾ. ನರೆಂದ್ರ ಪವಾರ ಭಾಗವಹಿಸಿದ್ದರು   

ಯಲ್ಲಾಪುರ: ತಂಬಾಕು ಉತ್ಪನ್ನಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಅಂಗಡಿಗಳ ಮೇಲೆ ತಾಲ್ಲೂಕು ತಂಬಾಕು ತನಿಖಾದಳ ಮಂಗಳವಾರ ದಾಳಿ ನಡೆಸಿ, ₹ 2800 ದಂಡ ವಿಧಿಸಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಲು ಅವಕಾಶ ನೀಡಬಾರದು. ಬಿಡಿಬಿಡಿಯಾಗಿ ಸಿಗರೇಟ್, ಬೀಡಿ ಮಾರಾಟ ಮಾಡಬಾರದು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಬಾರದು ಈ ಮೊದಲಾದ ವಿಷಯಗಳನ್ನು ಅಂಗಡಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ತಂಬಾಕು ಉತ್ಪನ್ನ ಮಾರಾಟ ಮಾಡಲು ಪರವಾನಗಿ ಪಡೆದಿರಬೇಕು ಎಂದು ತಿಳಿಸಲಾಯಿತು.

ತಹಶೀಲ್ದಾರ್‌ ತನುಜಾ ಸವದತ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೆಂದ್ರ ಪವಾರ ದಾಳಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.