ADVERTISEMENT

ಟೊಂಕ: ಕಡಲ ತೀರದಲ್ಲಿ ಮೊಟ್ಟೆ ಇಟ್ಟ ಆಮೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 13:46 IST
Last Updated 10 ಜನವರಿ 2025, 13:46 IST

ಹೊನ್ನಾವರ: ಕಾಸರಕೋಡ ಟೊಂಕ ಸಮೀಪ ಅರಬ್ಬೀ ಸಮುದ್ರ ತೀರದಲ್ಲಿ ಶುಕ್ರವಾರ ಬೆಳಿಗ್ಗೆ ಎರಡು ಆಮೆಗಳು ಮೊಟ್ಟೆ ಇಟ್ಟಿವೆ.

ಟೊಂಕದಲ್ಲಿ ಕಡಲಾಮೆ ಮೊಟ್ಟೆ ಇಡುವುದು ಸಾಮಾನ್ಯ ಸಂಗತಿಯಾದರೂ ಎರಡೆರಡು ಆಮೆಗಳು ಒಂದೇ ದಿನ ಮೊಟ್ಟೆ ಇಟ್ಟಿರುವುದು ವಿಶೇಷ ಘಟನೆ. ಎರಡು ಆಮೆಗಳು 100ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟಿರುವ ಅಂದಾಜಿದ್ದು 45 ದಿನಗಳ ನಂತರ ಈ ಮಟ್ಟೆಗಳೊಡೆದು ಮರಿಗಳು ಹೊರ ಬರಲಿವೆ. ಟೊಂಕ ಕಡಲಾಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿನ ಜೀವವೈವಿಧ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೀನುಗಾರರ ಪ್ರಯತ್ನ ಮುಂದುವರಿದಿದೆ’ ಎಂದು ಮೀನುಗಾರ ಮುಖಂಡ ರಾಜೇಶ ತಾಂಡೇಲ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಆಮೆ ಮೊಟ್ಟೆಗಳ ಸಂರಕ್ಷಣಾ ಕಾರ್ಯ ಕೈಗೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.