ADVERTISEMENT

ದಡಕ್ಕೆ ಬಂದ ಕಡಲಾಮೆಯ ಕಳೇಬರ

ಒಂದು ಮೀಟರ್‌ ಉದ್ದ, 100 ಕೆ.ಜಿ ತೂಕ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 15:14 IST
Last Updated 1 ಜುಲೈ 2019, 15:14 IST
ಕಾರವಾರದ ಸಾಗರ ದರ್ಶನ ಸಭಾಂಗಣದ ಹಿಂಭಾಗದ ಕಡಲತೀರಕ್ಕೆ ಸೋಮವಾರ ತೇಲಿ ಬಂದ ಆಲಿವ್ ರೈಡ್ಲಿ ಪ್ರಬೇಧಕ್ಕೆ ಸೇರಿದ ಕಡಲಾಮೆಯ ಕಳೇಬರ
ಕಾರವಾರದ ಸಾಗರ ದರ್ಶನ ಸಭಾಂಗಣದ ಹಿಂಭಾಗದ ಕಡಲತೀರಕ್ಕೆ ಸೋಮವಾರ ತೇಲಿ ಬಂದ ಆಲಿವ್ ರೈಡ್ಲಿ ಪ್ರಬೇಧಕ್ಕೆ ಸೇರಿದ ಕಡಲಾಮೆಯ ಕಳೇಬರ   

ಕಾರವಾರ: ಆಲಿವ್ ರೈಡ್ಲಿ ಪ್ರಬೇಧಕ್ಕೆ ಸೇರಿದ ಕಡಲಾಮೆಯ ಕಳೇಬರವು ನಗರದ ಸಾಗರ ದರ್ಶನ ಸಭಾಂಗಣದ ಹಿಂಭಾಗದ ಕಡಲತೀರಕ್ಕೆಸೋಮವಾರ ತೇಲಿ ಬಂದಿದೆ.

ದೇಹದ ಮೇಲೆ ಯಾವುದೇ ಗಾಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಮೀನುಗಾರಿಕೆಗೂ ನಿಷೇಧ ಇರುವುದರಿಂದ ಬಲೆಗಳು ಸಿಕ್ಕಿ ಸತ್ತಿರುವ ಸಾಧ್ಯತೆಗಳು ಬಹಳ ಕಡಿಮೆ.ವಯೋಸಹಜ ಸಾವು ಎಂದು ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ಒಂದು ಮೀಟರ್ ಉದ್ದ, ಒಂದು ಕ್ವಿಂಟಲ್ ತೂಕದಈ ಆಮೆಗೆ ಸುಮಾರು 70 ವರ್ಷ ವಯಸ್ಸಾಗಿದೆ ಎಂದು ಅವರು ಅಂದಾಜಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.