ADVERTISEMENT

24 ಕಡೆ ಮೀನು ಇಳಿದಾಣ ಕೇಂದ್ರ

ನಾಳೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಷರತ್ತುಬದ್ಧ ಅನುಮತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 14:19 IST
Last Updated 13 ಏಪ್ರಿಲ್ 2020, 14:19 IST

ಕಾರವಾರ:ಜಿಲ್ಲೆಯ ಕರಾವಳಿಯಐದು ತಾಲ್ಲೂಕುಗಳಲ್ಲಿ ಏ.15ರಿಂದ ನಾಡದೋಣಿ, 10 ಎಚ್.ಪಿ ಮೋಟರ್ ಅಳವಡಿಸಿದ ದೋಣಿಗಳು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ24ಕಡೆ ಮೀನು ಇಳಿದಾಣ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ.

ಇಳಿದಾಣಗಳು (ತಾಲ್ಲೂಕುವಾರು):ಕಾರವಾರ ತಾಲ್ಲೂಕಿನ ಮಾಜಾಳಿ, ದಾಂಡೇಬಾಗ್, ದೇವಭಾಗ (ಕೃಷ್ಣಮೂರ್ತಿ ಶೆಡ್ ಸಮೀಪ), ಅಲಿಗದ್ದಾ ಮತ್ತು ಮುದಗಾ ಕಡಲತೀರ. ಮೀನುಗಾರರು ಮಾಹಿತಿಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್ (ಮೊಬೈಲ್: 79968 04107).

ಅಂಕೋಲಾ ತಾಲ್ಲೂಕಿನ ಹಾರವಾಡ, ಹರಿಕಂತ್ರ ಕೇಣಿ, ಬೇಲೆಕೇರಿ ಮತ್ತು ಬೆಳಂಬಾರದಲ್ಲಿ ನಿಗದಿ ಮಾಡಲಾಗಿದೆ. ಮಾಹಿತಿಗೆ ರೆನಿಟಾ ಡಿಸೋಜಾ (ಮೊಬೈಲ್: 89713 68219).

ADVERTISEMENT

ಕುಮಟಾ ತಾಲ್ಲೂಕಿನ ಗಂಗಾವಳಿ, ಗೋಕರ್ಣ, ದೀವಗಿ, ಮಿರ್ಜಾನ ತಾರಿಬಾಗಿಲು, ಅಳ್ವೆದಂಡೆ, ಶಶಿಹಿತ್ತಲು, ವನ್ನಳ್ಳಿ, ಗುಡ್‌ಕಾಗಾಲ, ಧಾರೇಶ್ವರ. ಮಾಹಿತಿಗೆ ರವೀಂದ್ರ ಎನ್.ತಾಳೇಕರ್ (ಮೊಬೈಲ್: 94485 75374).

ಹೊನ್ನಾವರ ತಾಲ್ಲೂಕಿನ ಹಳದಿಪುರ– ಕರ್ಕಿ ಪಾವಿನಕುರ್ವೆ ಬೀಚ್, ಕಾಸರಕೋಡು– ಅಪ್ಸರಕೊಂಡ ಬೀಚ್, ಮಂಕಿಮಡಿ– ಮಂಕಿ ಕೊಪ್ಪದಮಕ್ಕಿ, ತುಳಸಿನಗರ– ಉದ್ಯಮನಗರ.ಮಾಹಿತಿಗೆ ಎಚ್.ತಮ್ಮಪ್ಪ (ಮೊಬೈಲ್: 99001 40158).

ಭಟ್ಕಳ ತಾಲ್ಲೂಕಿನ ಅಳ್ವೆಕೋಡಿ ಮತ್ತು ಮುರ್ಡೇಶ್ವರ. ಮಾಹಿತಿಗೆ ಚೇತನ್ (ಮೊಬೈಲ್: 73492 13478) ಸಂಪರ್ಕಿಸಬಹುದು.

ಈ ಅನುಮತಿಯು ಷರತ್ತಿಗೆ ಒಳಪಟ್ಟಿದ್ದು, ಮೀನು ಮಾರಾಟ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೀನು ಮಾರಾಟದ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಬೇಕು. ಮೀನುಗಾರ ಅಥವಾ ಮಾರಾಟಗಾರರಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.ಸ್ಥಳೀಯ ಅಧಿಕಾರಿಗಳ ಅನುಮತಿ ಪಡೆದು ಮನೆಮನೆಗೆ ಮಾರಾಟ ಮಾಡಬಹುದು.

ನಿಗದಿಪಡಿಸಿದ ಸ್ಥಳದಲ್ಲಿ ಮತ್ತುಸಮಯದಲ್ಲಿ ಮಾತ್ರ ಮೀನುಗಾರಿಕೆ ಮಾಡಬೇಕು. ಒಂದು ದೋಣಿಗೆ ಗರಿಷ್ಠ ಮೂವರಂತೆ ಹೋಗಬಹುದು. ಎಲ್ಲರೂ ಕಡ್ಡಾಯವಾಗಿ ಮುಖಗವಸು ಧರಿಸಬೇಕು ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.