ADVERTISEMENT

ಭಟ್ಕಳದಲ್ಲೇ ಚಿಕಿತ್ಸೆಗೆ ಕ್ರಮ ಕೈಗೊಳ್ಳಿ: ರೂಪಾಲಿ

ಸಚಿವರು, ಸಂಸದರಿಗೆ ಶಾಸಕಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2020, 15:28 IST
Last Updated 10 ಮೇ 2020, 15:28 IST
ರೂಪಾಲಿ ನಾಯ್ಕ
ರೂಪಾಲಿ ನಾಯ್ಕ   

ಕಾರವಾರ: ಕೋವಿಡ್–19 ಸೋಂಕಿತರಿಗೆ ಕಾರವಾರ ವೈದ್ಯಕೀಯ ಕಾಲೇಜಿನ ವಿಶೇಷ ವಾರ್ಡ್‌ನ ಬದಲಾಗಿ ಭಟ್ಕಳದಲ್ಲಿ ಅಥವಾ ಈ ಹಿಂದಿನಂತೆ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಾಲಿ ನಾಯ್ಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಮನವಿ ಸಲ್ಲಿಸಿರುವ ಅವರು,ದಿನದಿಂದ ದಿನಕ್ಕೆ ಭಟ್ಕಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದುಕಳವಳಕಾರಿ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ವೈದ್ಯಕೀಯ ಕಾಲೇಜ್‌ನಲ್ಲಿರುವ ಕೋವಿಡ್–19 ವಾರ್ಡ್ ಸುರಕ್ಷಿತವಾಗಿದ್ದು,ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮೇಲ್ವಿಚಾರಣೆ, ಭದ್ರತೆ, ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳೇ ಕೊರೊನಾ ವಾರ್ಡ್‌ನಲ್ಲೂ ಉಸ್ತುವಾರಿ ವಹಿಸಿದ್ದಾರೆ. ಸರ್ಕಾರ ಎಲ್ಲ ಜಿಲ್ಲಾ ಕೇಂದ್ರ ಹಾಗೂವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದಂತೆಇಲ್ಲೂ ಮಾಡಲಾಗಿದೆ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿದ್ದು, ವ್ಯವಸ್ಥೆಗಳನ್ನು ಪರಿಶೀಲಿಸಿದ್ದೇನೆ. ಹೀಗಾಗಿ ಜನರುಆತಂಕಪಡಬಾರದು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಆದರೆ, ಕೋವಿಡ್ ವಾರ್ಡ್‌ಸುತ್ತಮುತ್ತ ಜನವಸತಿ ಪ್ರದೇಶವಿದೆ. ನಗರದ ಪ್ರಮುಖ ರಸ್ತೆಯ ಮೂಲಕವೇ ಭಟ್ಕಳದ ಕೊರೊನಾ ಸೋಂಕಿತರನ್ನು ಕರೆತರಲಾಗುತ್ತಿದೆ. ಆಂಬುಲೆನ್ಸ್‌ಗಳು ನಿರಂತರವಾಗಿಸಂಚರಿಸುತ್ತಿವೆ.ಇದುವರೆಗೆ ಕಾರವಾರದಲ್ಲಿ ಕೊರೊನಾ ಪ್ರಕರಣವಿಲ್ಲ. ಸೋಂಕಿತರಿಗೆ ಆಶ್ರಯ ನೀಡಿ ಇಲ್ಲೂ ಸೋಂಕು ಹರಡಿದರೆ ಎಂಬ ಭಯ ಜನರಲ್ಲಿದೆ. ಈ ಹಂತದಲ್ಲಿ ನನ್ನ ಮತ ಕ್ಷೇತ್ರದ ಜನರಲ್ಲಿ ಗಾಬರಿ, ಗೊಂದಲ ಉಂಟಾಗುವುದನ್ನು ತಡೆಯಬೇಕಾಗಿದೆ’ ಎಂದು ಅವರುಉಲ್ಲೇಖಿಸಿದ್ದಾರೆ.

‘ಲಾಕ್‌ಡೌನ್‌ನ ಮೂರನೇ ಹಂತದಲ್ಲಿ ಕೂಡ ಅನವಶ್ಯಕವಾಗಿ ಮನೆಯಿಂದ ಹೊರಬರಬಾರದು. ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು. ಗುಂಪು ಸೇರಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.