ADVERTISEMENT

ಯಲ್ಲಾಪುರ| ಉದ್ಯೋಗ ಸೃಷ್ಟಿಗೆ ಪ್ರಯತ್ನ: ಮುರುಗೇಶ್ ನಿರಾಣಿ

ವಿಜಯ ಸಂಕಲ್ಪ ಸಮಾವೇಶದಲ್ಲಿ ಮುರುಗೇಶ್ ನಿರಾಣಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 14:06 IST
Last Updated 19 ಮಾರ್ಚ್ 2023, 14:06 IST
ಯಲ್ಲಾಪುರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಸಚಿವ ಮುರಗೇಶ ನಿರಾಣಿ, ವೆಂಕಟೇಶ ನಾಯ್ಕ, ಎನ್.ಎಸ್. ಹೆಗಡೆ ಇದ್ದಾರೆ
ಯಲ್ಲಾಪುರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಸಚಿವ ಮುರಗೇಶ ನಿರಾಣಿ, ವೆಂಕಟೇಶ ನಾಯ್ಕ, ಎನ್.ಎಸ್. ಹೆಗಡೆ ಇದ್ದಾರೆ   

ಯಲ್ಲಾಪುರ: ‘ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯಲ್ಲಾಪುರದಲ್ಲಿ ಬೃಹತ್ ಯೋಜನೆ ತರಲು ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಯತ್ನಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಭಾನುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿವೆ. ಪಕ್ಷ ಈ ಸಾಧನೆಯ ಆಧಾರದಲ್ಲಿ ಮತದಾರರ ಬಳಿ ಹೋಗಲಿದೆ’ ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ‘ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಸೈನಿಕರ ಮಾದರಿಯಲ್ಲಿ ಎದುರಿಸಲು ಸಿದ್ಧರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕೆಲಸಗಳಿಂದ ಮತದಾರರು ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ’ ಎಂದರು.

ADVERTISEMENT

ಪಂಚಾಯತ್ ರಾಜ್ ಹಾಗೂ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ‘ಕಾಂಗ್ರೆಸ್ ಘೋಷಣೆಗಳ ಪಕ್ಷ. ಬಿಜೆಪಿ ಭರವಸೆ ಅನುಷ್ಠಾನಕ್ಕೆ ತರುವ ಪಕ್ಷ. ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಗುರಿಯಾಗಲಿದೆ’ ಎಂದರು

ಪಟ್ಟಣದ ಗ್ರಾಮದೇವಿ ದೇವಸ್ಥಾನದ ಎದುರಿನಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಯಿತು. ಟಿಳಕ ಚೌಕ, ಬಸವೇಶ್ವರ, ಅಂಬೇಡ್ಕರ್‌ ವೃತ್ತದ ಶಿವಾಜಿ ಸರ್ಕಲ್‌ವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಉಮ್ಮಚಗಿಯ ಮಂಜುಶ್ರೀ ಕಲಾತಂಡದ ಸದಸ್ಯರ ಡೋಲು ಕುಣಿತ ಆಕರ್ಷಕವಾಗಿತ್ತು.

ಪ್ರಮುಖರಾದ ವಿವೇಕ ಡಬ್ಬಿ, ಎನ್.ಎಸ್. ಹೆಗಡೆ, ವೆಂಕಟೇಶ ನಾಯಕ, ಕೆ.ಜಿ. ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಉಮೇಶ ಭಾಗ್ವತ, ಗಣಪತಿ ಮಾನಿಗದ್ದೆ, ರಾಜೇಂದ್ರ ನಾಯ್ಕ, ರವಿ ಭಟ್ಟ ವಡ್ರಮನೆ, ಪ್ರಸಾದ ಹಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.