ADVERTISEMENT

ಕಾರವಾರ: ಎರಡು ಡಾಲ್ಫಿನ್‌ಗಳ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:32 IST
Last Updated 24 ಮೇ 2022, 15:32 IST
ಕಾರವಾರದ ಅಲಿಗದ್ದಾ ಕಡಲತೀರದಲ್ಲಿ ಮಂಗಳವಾರ ಕಂಡುಬಂದ ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್’ ಕಳೇಬರವನ್ನು ವಲಯ ಅರಣ್ಯಾಧಿಕಾರಿ ಪ್ರಮೋದ್ ಪರಿಶೀಲಿಸಿದರು
ಕಾರವಾರದ ಅಲಿಗದ್ದಾ ಕಡಲತೀರದಲ್ಲಿ ಮಂಗಳವಾರ ಕಂಡುಬಂದ ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್’ ಕಳೇಬರವನ್ನು ವಲಯ ಅರಣ್ಯಾಧಿಕಾರಿ ಪ್ರಮೋದ್ ಪರಿಶೀಲಿಸಿದರು   

ಕಾರವಾರ: ತಾಲ್ಲೂಕಿನ ಅಲಿಗದ್ದಾ ಮತ್ತು ಮಾಜಾಳಿಯ ಕಡಲತೀರಗಳಲ್ಲಿ ಮಂಗಳವಾರ ಎರಡು ಡಾಲ್ಫಿನ್‌ಗಳ ಕಳೇಬರಗಳು ಪತ್ತೆಯಾಗಿವೆ.

ಸಣ್ಣ ಗಾತ್ರದ ‘ರಿಸ್ಸೊ’ ಡಾಲ್ಫಿನ್ ಮೃತದೇಹವುಮಾಜಾಳಿಯಲ್ಲಿ ಕಂಡುಬಂದಿದ್ದು, ಸುಮಾರು ಒಂದು ಮೀಟರ್ ಉದ್ದವಿತ್ತು. ಈ ಭಾಗದಲ್ಲಿ ಅಪರೂಪದ ಪ್ರಭೇದ ಇದಾಗಿದೆ. ಮೀನುಗಾರಿಕಾ ದೋಣಿಯ ಬಲೆಗೆ ಸಿಕ್ಕಿ ಹೊರ ಬರಲಾರದೇ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ನಗರದ ಸಮೀಪದ ಅಲಿಗದ್ದಾದಲ್ಲಿ ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್’ ಕಳೇಬರ ಕಾಣಿಸಿದೆ. ಇದು ಸುಮಾರು 2.5 ಮೀಟರ್ ಉದ್ದವಿತ್ತು. ಮೃತಪಟ್ಟು ಸುಮಾರು 15 ದಿನಗಳ ಮೇಲಾಗಿರುವ ಸಾಧ್ಯತೆಯಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಹಾಗಾಗಿ ಅದರ ಮರಣೋತ್ತರ ಪರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.