ಶಿರಸಿ : ಯುಗಾದಿ ಉತ್ಸವ ಸಮಿತಿ ವತಿಯಿಂದ ಮಾರ್ಚ್ 30ರಂದು ನಡೆಯುವ ಸಾರ್ವಜನಿಕ ಯುಗಾದಿ ಉತ್ಸವದ ಪೂರ್ವಭಾವಿಯಾಗಿ ನಗರದ ವಿವಿಧೆಡೆ ಜಾಗೃತಿ ಬೈಕ್ ರ‍್ಯಾಲಿ ನಡೆಯಿತು.
ಪ್ರತಿ ವರ್ಷವೂ ಯುಗಾದಿ ಅಂಗವಾಗಿ ಬೈಕ್ ರ‍್ಯಾಲಿ ನಡೆಯುತ್ತಿದ್ದು, ಈ ಬಾರಿಯೂ ಶುಕ್ರವಾರ ಇಲ್ಲಿಯ ವಿಕಾಸಾಶ್ರಮ ಬಯಲಿನಲ್ಲಿ ಸೇರಿದ 500ಕ್ಕೂ ಅಧಿಕ ಕಾರ್ಯಕರ್ತರು ತಮ್ಮ ಬೈಕ್‍ಗಳನ್ನು ಅಲಂಕರಿಸಿಕೊಂಡು, ಬೈಕ್‍ಗಳಿಗೆ ಧ್ವಜ, ಹೆಗಲಿಗೆ ಕೇಸರಿ ಶಾಲು ಹಾಕಿ ಮೆರವಣಿಗೆ ನಡೆಸಿದರು. ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷ ರಮೇಶ ದುಭಾಶಿ ರ‍್ಯಾಲಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.