ADVERTISEMENT

ಮಾಜಾಳಿ ಕಡಲತೀರಕ್ಕೆ ಕೇಂದ್ರ ಸಚಿವ ರೂಪಾಲಾ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 7:23 IST
Last Updated 18 ಮಾರ್ಚ್ 2023, 7:23 IST
   

ಕಾರವಾರ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಸಚಿವ ಪುರುಷೋತ್ತಮ ರೂಪಾಲಾ ಶನಿವಾರ ತಾಲ್ಲೂಕಿನ ಮಾಜಾಳಿಯ ಗಾಬೀತವಾಡಾದ ಕಡಲತೀರದಲ್ಲಿ ಸ್ಥಳೀಯ ಮೀನುಗಾರರ ಜತೆ ಚರ್ಚಿಸಿದರು.

ಮೀನುಗಾರಿಕೆ ಚಟುವಟಿಕೆ, ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಮಾಜಾಳಿ ಮೀನುಗಾರಿಕಾ ಬಂದರು ಯೋಜನೆಯ ಬಗ್ಗೆ ಮಾಹಿತಿ ಪಡೆದರು.

ಮೀನುಗಾರರ ಮನೆಗೆ ತೆರಳಿ ವೃದ್ದರು, ಮಹಿಳೆಯರ ಕುಶಲೋಪರಿ ವಿಚಾರಿಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, 'ಪ್ರಧಾನಿ ಮೋದಿ ಮೀನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ರಚಿಸಿದ್ದಾರೆ. ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು' ಎಂದರು.

ಮೀನುಗಾರಿಕಾ ಇಲಾಖೆ ರಾಜ್ಯ ಖಾತೆ ಸಚಿವ ಎಸ್.ಮುರುಗನ್, ರಾಜ್ಯ ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕಿ ರೂಪಾಲಿ ನಾಯ್ಕ, ಮೀನುಗಾರ ಮುಖಂಡ ಯಶಪಾಲ್ ಸುವರ್ಣ, ಇತರರು ಇದ್ದರು.

ಕೇಂದ್ರ ಸರ್ಕಾರದ ಸಾಗರ ಪರಿಕ್ರಮ ಕಾರ್ಯಕ್ರಮದ ನಾಲ್ಕನೇ ಹಂತದ ಅಂಗವಾಗಿ ರಾಜ್ಯಕ್ಕೆ ಭೇಟಿ ನೀಡಿರುವ ಸಚಿವ ಜಿಲ್ಲೆಯ ವಿವಿಧೆಡೆ ಶನಿವಾರ ಸಂವಾದ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.