ಕಾರವಾರ: ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮಾಡುವ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಅದರ ನಿರ್ವಹಣೆ ಸಿಬ್ಬಂದಿಗೆ ಕಷ್ಟಕರವಾಗಿದೆ. ಇಬ್ಬರು ಅಥವಾ ಮೂವರು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈ ಸಮಸ್ಯೆ ಉಂಟಾಗಿದೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
‘ಸಮೀಕ್ಷೆಗೆ 60 ಪ್ರಶ್ನೆಗಳು ಅಗತ್ಯವಿದ್ದವೇ? ಪ್ರತಿ ಮನೆಯಲ್ಲಿ ಇಬ್ಬರು–ಮೂವರು ಸದಸ್ಯರಿಂದ ಒಟಿಪಿ ಪಡೆಯುವುದು, ಮೂರು ಬಾರಿ ಮನೆ ಮನೆಗಳಿಗೆ ಭೇಟಿ ನೀಡುವಂತಹ ಸಮೀಕ್ಷೆಗೆ ಯೋಜನೆ ರೂಪಿಸಿದ್ದು ಸರಿಯಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘20 ದಿನಗಳಿಂದ ಆಡಳಿತ ಸ್ತಬ್ಧಗೊಂಡಿದೆ. ಸಿಬ್ಬಂದಿಗೆ ಸಮೀಕ್ಷೆ ಮಾಹಿತಿ ಕ್ರೋಢೀಕರಿಸುವುದೇ ಕೆಲಸವಾಗಿದೆ. ತಜ್ಞರನ್ನು ನೇಮಿಸಿಕೊಂಡು ಅವರ ಸಲಹೆ ಆಧರಿಸಿ ಸಮೀಕ್ಷೆ ನಡೆಸಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.