ADVERTISEMENT

ಅಕಾಲಿಕ ಮಳೆ: ರೈತರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 17:30 IST
Last Updated 17 ಜನವರಿ 2022, 17:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಿರಸಿ: ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ ಮಳೆ ಸುರಿಯಿತು. ಅಕಾಲಿಕ ಮಳೆ ಕಂಡು ರೈತರು ಆತಂಕಕ್ಕೆ ಒಳಗಾದರು.

ದೇವಿಮನೆ ಘಟ್ಟ ಪ್ರದೇಶ, ಬಂಡಲ, ರಾಗಿಹೊಸಳ್ಳಿ, ಮಂಜುಗುಣಿ ಭಾಗದಲ್ಲಿ ಕೆಲ ಹೊತ್ತು ವ್ಯಾಪಕ ಮಳೆ ಸುರಿಯಿತು. ಅಡಿಕೆ ಕೊಯ್ಲು ಅವಧಿ ಇದಾಗಿರುವ ಕಾರಣ ಬಹುತೇಕ ರೈತರ ಮನೆ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ನೀರಿಗೆ ಒದ್ದೆಯಾದವು.

'ಮುನ್ಸೂಚನೆ ಇಲ್ಲದೆ ದಿಢೀರನೆ ಮಳೆ ಸುರಿದಿದ್ದರಿಂದ ಅಡಿಕೆಗಳು ಒದ್ದೆಯಾಗಿವೆ. ಹೀಗಿಯೆ ಮಳೆ ಸುರಿದರೆ ಕೈಗೆ ಸಿಕ್ಕ ಫಸಲು ಹಾಳಾಗುವ ಆತಂಕವಿದೆ. ದಟ್ಟ ಚಳಿಗಾಲದ ಅವಧಿಯಲ್ಲಿ ಈ ರೀತಿ ಏಕಾಏಕಿ ಮಳೆ ಸುರಿದಿದ್ದನ್ನು ಇದೇ ಮೊದಲ ಬಾರಿಗೆ ಕಂಡಿದ್ದೇವೆ' ಎಂದು ಕಲ್ಲಳ್ಳಿ ಗ್ರಾಮಸ್ಥ ನರೇಶ್ ಅಚ್ಚರಿ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.