ADVERTISEMENT

ಎರಡು ದಿನಗಳ ಸದಾಶಿವಗಡದ ಉರೂಸ್‌ಗೆ ತೆರೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 16:06 IST
Last Updated 25 ಅಕ್ಟೋಬರ್ 2018, 16:06 IST
ಕಾರವಾರ ತಾಲ್ಲೂಕಿನ ಸದಾಶಿಗಡದ ಹಜರತ್ ಶಾ ಸಂಶುದ್ದೀನ್ ಉರ್ಫ್‌ ಶಾ ಕಜರಮುದ್ದೀನ್ ಅವ್ಲಿಯಾ ಅಲ್ಲಾ ದರ್ಗಾದ ವಾರ್ಷಿಕ ಉರೂಸ್ ನಿಮಿತ್ತ ಭಕ್ತರು ಚಾದರ ಅರ್ಪಿಸಿದರು.
ಕಾರವಾರ ತಾಲ್ಲೂಕಿನ ಸದಾಶಿಗಡದ ಹಜರತ್ ಶಾ ಸಂಶುದ್ದೀನ್ ಉರ್ಫ್‌ ಶಾ ಕಜರಮುದ್ದೀನ್ ಅವ್ಲಿಯಾ ಅಲ್ಲಾ ದರ್ಗಾದ ವಾರ್ಷಿಕ ಉರೂಸ್ ನಿಮಿತ್ತ ಭಕ್ತರು ಚಾದರ ಅರ್ಪಿಸಿದರು.   

ಕಾರವಾರ: ತಾಲ್ಲೂಕಿನ ಸದಾಶಿಗಡದ ಹಜರತ್ ಶಾ ಸಂಶುದ್ದೀನ್ ಉರ್ಫ್‌ ಶಾ ಕಜರಮುದ್ದೀನ್ ಅವ್ಲಿಯಾ ಅಲ್ಲಾ ದರ್ಗಾದ ವಾರ್ಷಿಕ ಉರೂಸ್ ಗುರುವಾರ ರಾತ್ರಿ ಅದ್ಧೂರಿಯಾಗಿ ತೆರೆಕಂಡಿತು.

ಎರಡು ದಿನಗಳಿಂದ ನಡೆಯುತ್ತಿದ್ದ ಈ ಮಹೋತ್ಸವವು, ದೆಹಲಿಯ ಕಲಾವಿದರಾದ ಗುಲಾಂ ಫಾಹೀಂ ವಾರಸಿ ಹಾಗೂ ಶಾಕೀರ ನಾಝಾ ತಂಡದವರಿಂದ ಕವ್ವಾಲಿ ಗಾಯನದೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.

ಉತ್ಸವದ ನಿಮಿತ್ತ ದರ್ಗಾ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು. ಇಲ್ಲಿಗೆ ಬಂದಿದ್ದ ಸಾವಿರಾರು ಮುಸಲ್ಮಾನರು ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ಹರಕೆ ರೂಪದಲ್ಲಿ ಗಂಧದಕಡ್ಡಿ ಹಾಗೂ ಚಾದರ ಅರ್ಪಿಸಿದರು. ಹಿಂದೂಗಳು ಹಾಗೂ ಕ್ರೈಸ್ತರೂ ದರ್ಗಾಕ್ಕೆ ಬಂದು ಪ್ರಾರ್ಥನೆಸಲ್ಲಿಸಿದ್ದು ವಿಶೇಷವಾಗಿತ್ತು.

ADVERTISEMENT

ವ್ಯಾಪಾರ ಭರಾಟೆ: ಉತ್ಸವದ ನಿಮಿತ್ತ ದರ್ಗಾಕ್ಕೆ ಸಾಗುವ ರಸ್ತೆಯಲ್ಲಿ ನೂರಾರು ಗೂಡಂಗಡಿಗಳು ತಲೆ ಎತ್ತಿದ್ದವು. ಮಳಿಗೆಯಲ್ಲಿದ್ದ ಅಲಂಕಾರಿಕ ವಸ್ತುಗಳು ಹಾಗೂ ಆಭರಣಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದರು. ಸ್ಥಳೀಯರಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.