ಪ್ರಾತಿನಿಧಿಕ ಚಿತ್ರ
ಶಿರಸಿ: ಸ್ವತಂತ್ರ ಪ್ರಜೆಗಳಾದ ನಾವು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಚಿಕ್ಕದಾದ ಕೊಡುಗೆ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಪಿ. ಸತೀಶ ಹೇಳಿದರು.
ಶುಕ್ರವಾರ ತಾಲ್ಲೂಕು ಪಂಚಾಯಿತಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ವಿದೇಶಿ ವಸ್ತುಗಳಿಗೆ ಮಾರು ಹೋಗುತ್ತಿದ್ದೇವೆ. ನಮ್ಮಲ್ಲಿನ ಸಂಪನ್ಮೂಲಗಳ ಬಳಕೆಯ ಸದುಪಯೋಗ ಪಡೆದು ಸ್ಥಳೀಯ ಉದ್ಯೋಗಗಳಿಗೆ ಪ್ರಾಮುಖ್ಯತೆ ನೀಡೋಣ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಮಾತನಾಡಿ, ಸ್ವತಂತ್ರ ಎನ್ನುವುದು ಸ್ವೇಚ್ಛಾಚಾರವಲ್ಲ. ಅದು ನಮಗೆ ಸಿಕ್ಕಿರುವ ಅವಕಾಶ. ಉತ್ತಮ ಕೆಲಸಕ್ಕೆ ಬಳಸಿಕೊಳ್ಳೋಣ ಎಂದರು.
ಸಹಾಯಕ ಲೆಕ್ಕಧಿಕಾರಿಗಳಾದ ಸೀತಾರಾಮ ನಾಯ್ಕ, ಯೋಜನಾಧಿಕಾರಿ ಅಶೋಕ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚೆಳ್ಳಿ, ತಾಪಂ ವ್ಯವಸ್ಥಾಪಕ ಸುಬ್ರಾಯ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.