ADVERTISEMENT

ಎತ್ತಿಗೆ ನಾಯಿ ಕಡಿತ; ಮನೆ - ಮಂದಿಗೆಲ್ಲ ಚಿಕಿತ್ಸೆ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 12:07 IST
Last Updated 9 ಮಾರ್ಚ್ 2019, 12:07 IST
ಹುಚ್ಚು ಹಿಡಿದಿರುವ ಎತ್ತನ್ನು ಗದ್ದೆಯಲ್ಲಿ ಹಗ್ಗದಿಂದ ಕಟ್ಟಿ ಹಾಕಿರುವುದು
ಹುಚ್ಚು ಹಿಡಿದಿರುವ ಎತ್ತನ್ನು ಗದ್ದೆಯಲ್ಲಿ ಹಗ್ಗದಿಂದ ಕಟ್ಟಿ ಹಾಕಿರುವುದು   

ಮುಂಡಗೋಡ: ನಾಯಿ ಕಡಿತಕ್ಕೆ ಒಳಗಾದ ಎತ್ತಿನ ದೆಸೆಯಿಂದ ಅದನ್ನು ಸಾಕಿದಮನೆ ಮಂದಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ! ಮೇವು ತಿನ್ನದೇ, ನೀರು ಕುಡಿಯದೇ ಎತ್ತು ಎದುರಿಗೆ ಬಂದವರಿಗೆಲ್ಲ ಹಾಯಲು ಯತ್ನಿಸುತ್ತಿದೆ. ಅದನ್ನುನಾಲ್ಕೈದು ಹಗ್ಗಗಳಿಂದ ಗದ್ದೆಯಲ್ಲಿ ಕಟ್ಟಿಹಾಕಲಾಗಿದೆ.

ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾಜಿ ಮಹಾದೇವಪ್ಪ ಸುಣಗಾರ(ಸೈಕಲ್‌) ಎಂಬುವರಿಗೆ ಸೇರಿದ ಎತ್ತಿಗೆಕೆಲವು ದಿನಗಳ ಹಿಂದೆ ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. ಅದಕ್ಕಾಗಿ ಎತ್ತಿಗೆಪಶುವೈದ್ಯರಿಂದ ಒಂದು ಇಂಜೆಕ್ಷನ್ ಮಾಡಿಸಿದ್ದರು.ಆದರೆ ಎರಡು ದಿನಗಳ ಹಿಂದೆ ಎತ್ತು ಏಕಾಎಕಿ ಕೋಳಿ, ನಾಯಿ ಮತ್ತು ಜನರಿಗೆ ಹಾಯಲು ಯತ್ನಿಸಿದೆ.ಇದರಿಂದ ಆತಂಕಗೊಂಡ ಮನೆಯವರು ದನವನ್ನು ಹಿಡಿಯಲು ಮುಂದಾದಾಗ ಅವರಿಗೂ ಇರಿಯಲು ಮುಂದಾಗಿದೆ.ಪಶುವೈದ್ಯರು ಪರೀಕ್ಷಿಸಿದಾಗ ಹುಚ್ಚು ಹಿಡಿದಿರುವುದು ಗೊತ್ತಾಗಿದೆ. ನಾಲ್ಕೈದು ಹಗ್ಗಗಳಿಂದ ಹರಸಾಹಸಪಟ್ಟು ಗದ್ದೆಯಲ್ಲಿ ಕಟ್ಟಿ ಹಾಕಿದ್ದಾರೆ.

ಮನೆ ಮಂದಿಗೆ ಚಿಕಿತ್ಸೆ: ಹುಚ್ಚು ಹಿಡಿದಿರುವ ಎತ್ತಿನ ಜೊಲ್ಲು ಮನುಷ್ಯರ ಗಾಯಕ್ಕೆ ತಾಗಿದರೆ ಕೆಟ್ಟಪರಿಣಾಮ ಆಗುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿದ್ದ ಹತ್ತು ಜನರು ಸಹ ಇಂಜೆಕ್ಷನ್‌ ಪಡೆದಿದ್ದಾರೆ. ಅಲ್ಲದೇ ಮನೆಯಲ್ಲಿ ಸಾಕಿರುವ ಉಳಿದ ನಾಲ್ಕು ಜಾನುವಾರುಗಳಿಗೂ ಚಿಕಿತ್ಸೆ ಕೊಡಿಸಲಾಗಿದೆ.

ADVERTISEMENT

‘ಒಂದು ಕಡೆ ₹40–₹45 ಸಾವಿರ ಬೆಲೆ ಬಾಳುವ ಎತ್ತು ಕಣ್ಮುಂದೆ ಒದ್ದಾಡುತ್ತಿದೆ. ಮತ್ತೊಂದೆಡೆ ಮನೆ ಮಂದಿ ತಲಾ ಐದು ಇಂಜೆಕ್ಷನ್‌ ಪಡೆಯಬೇಕಾಗಿದೆ’ ಎಂದು ರೈತ ಶಿವಾಜಿ ನೊಂದು ನುಡಿದರು.

‘ಎತ್ತಿಗೆ ಐದು ಇಂಜೆಕ್ಷನ್‌ ಮಾಡಿಸಬೇಕಾಗಿತ್ತು. ಆದರೆ ಅವರುಒಂದೇ ಇಂಜೆಕ್ಷನ್ ಕೊಡಿಸಿದ್ದರು. ಈಗ ಹುಚ್ಚು ಉಲ್ಬಣಗೊಂಡು ಇನ್ನೆರಡು ದಿನದಲ್ಲಿ ಎತ್ತು ಸಾಯುವ ಸಾಧ್ಯತೆಯಿದೆ’ ಎಂದು ಪಶುವೈದ್ಯ ಡಾ.ಜಯಚಂದ್ರ ಕೆಂಪಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.